Wednesday, October 9, 2024
Homeಉಡುಪಿಚುನಾವಣಾ ಸೋಲಿನ ಬೆನ್ನಲ್ಲೇ ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ʻಗೋ ಬ್ಯಾಕ್‌ʼ ಅಭಿಯಾನ!

ಚುನಾವಣಾ ಸೋಲಿನ ಬೆನ್ನಲ್ಲೇ ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ʻಗೋ ಬ್ಯಾಕ್‌ʼ ಅಭಿಯಾನ!

ಉಡುಪಿ: ಕರಾವಳಿಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನ ಬಹಿರಂಗವಾಗಿಯೇ ಹೊರಬಿದ್ದಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ʻಗೋ ಬ್ಯಾಕ್‌ʼ ಅಭಿಯಾನ ಆರಂಭವಾಗಿದೆ.
ಉಡುಪಿಯ ಕಾಂಗ್ರೆಸ್‌ ಕಾರ್ಯಕರ್ತರು ಈ ಅಭಿಯಾನದ ಹಿಂದಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಹೆಬ್ಬಾಳ್ಕರ್‌ ನಿರ್ಲಕ್ಷ್ಯವೇ ಸೋಲಿಗೆ ಕಾರಣ ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ. ಹೀಗಾಗಿ ಸೋಲಿನ ಸಿಟ್ಟಿನಿಂದ ಕಾರ್ಯಕರ್ತರು ಗೋ ಬ್ಯಾಕ್‌ ಅಭಿಯಾನ ಹಮ್ಮಿಕೊಂಡಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸುವಂತೆಯೂ ಆಗ್ರಹ ಕೇಳಿಬಂದಿದೆ.

RELATED ARTICLES
- Advertisment -
Google search engine

Most Popular