ಮೊಗ್ರು :ಮೊಗ್ರು ಗ್ರಾಮದ ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನ ವತಿಯಿಂದ ಸಾಮಾಜಿಕ ಸೇವಾ ಅಂಗವಾಗಿ ಮುಗೇರಡ್ಕ ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಮತ್ತು ಮಕ್ಕಳಿಗೆ ಅನುಕೂಲವಾಗುವ ಹತ್ತು ಕುರ್ಚಿಯನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಗೇರಡ್ಕ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಡಿ ರಾಮಣ್ಣ ಗೌಡ ದೇವಸ್ಯ ಉಪಾಧ್ಯಕ್ಷರಾದ ಮನೋಹರ್ ಗೌಡ ಅಂತರ, ಕಾರ್ಯದರ್ಶಿಗಳಾದ ಸುಧಾಕರ್ ಗೌಡ ನ್ಯಾಮಾರ್ , ಪದಾಧಿಕಾರಿಗಳಾದ ರಾಮಣ್ಣ ಗೌಡ ಎರ್ಮಾಲ, ಕೇಶವ ಗೌಡ ಜಾಲ್ನಡೆ, ಬಾಬು ಗೌಡ ಮುಗೇರಡ್ಕ, ಪುರಂದರ ಗೌಡ ನ್ಯಾಮಾರ್ ಚಂದ್ರಹಾಸ ದೇವಸ್ಯ, ಹಾಗು ಅಂಗನವಾಡಿ ಕಾರ್ಯಕರ್ತೆ ಸುಧಾಕ್ಷಿಣಿ, ಅಂಗನವಾಡಿ ಸಹಾಯಕಿ ಪವಿತ್ರ ಕೆ. ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.