Monday, January 13, 2025
Homeಮಂಗಳೂರುರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾರಾಡಿಯ ಸೃಜನ ಕುಲಾಲ್ ಗೆ ಚಿನ್ನದ ಪದಕ

ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾರಾಡಿಯ ಸೃಜನ ಕುಲಾಲ್ ಗೆ ಚಿನ್ನದ ಪದಕ

ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ 16 ವರ್ಷ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಾಂತವಾರ ಗ್ರಾಮದ ಬಾರಾಡಿಯ ಸೃಜನ ಕುಲಾಲ್ ಇವರು ಭಾಗವಹಿಸಿ ಕುಮಿಟೆಯಲ್ಲಿ(ಫೈಟಿಂಗ್ ನಲ್ಲಿ) ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ಇವರು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಯಾಗಿದ್ದಾರೆ. ಇವರು ಕಾಂತಾವರ ಗ್ರಾಮದ ಬಾರಾಡಿ ಶ್ರೀ ಜಗದೀಶ್ ಕುಲಾಲ್ ಹಾಗೂ ಶ್ರೀಮತಿ ಜ್ಯೋತಿ ಕುಲಾಲ್ ದಂಪತಿಗಳ ಪುತ್ರಿ. ಇವರಿಗೆ ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್ ಹಾಗೂ ಮೃಣಾಲಿ ಶೆಟ್ಟಿ ಇವರು ತರಬೇತಿ ನೀಡಿರುತ್ತಾರೆ. ಕಾಂತವಾರ ಕುಲಾಲ ಸಂಘದಿಂದ ಶುಭ ಹಾರೈಸಿದ್ದಾರೆ.

RELATED ARTICLES
- Advertisment -
Google search engine

Most Popular