ಮುಲ್ಕಿ : ಪ್ರತಿಷ್ಠಿತ ನಿಟ್ಟಿ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿಯಲ್ಲಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡ ನಮ್ಮೂರಿನ ಹೆಮ್ಮೆಯ ಪ್ರತಿಭೆ ನೇಹಾ ಯಾದವ ದೇವಾಡಿಗ ಇವರಿಗೆ ಹೃದಯಾಂತರಾಳದ ಅಭಿನಂದನೆಗಳು. ಭರತನಾಟ್ಯ ಕಲಾವಿದೆಯಾಗಿ ಅದ್ಭುತ ಪ್ರತಿಭೆಯನ್ನು ಹೊಂದಿದ ನೇಹ ದೇವಾಡಿಗ ಇವರು ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿ.
ಕೆಂಚನಕೆರೆ ಯೋಗೋಪಾಸನ ಸಂಸ್ಥೆಯ ವಿದ್ಯಾರ್ಥಿ. ಯೋಗ ಗುರು ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸುರತ್ಕಲ್ ಇಲ್ಲಿಯ ಹಿರಿಯ ವಲಯ ಪ್ರಬಂಧಕರಾದ ಲಯನ್ ಯಾದವ ದೇವಾಡಿಗ ಮತ್ತು ಹಳೆಯಂಗಡಿ ಕೆನರಾ ಬ್ಯಾಂಕ್ ಇದರ ಅಧಿಕಾರಿ ಜಯಶ್ರೀ ಯಾದವ ದೇವಾಡಿಗ ಇವರ ಮಗಳಾದ ನೇಹ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವೃತ್ತಿಯನ್ನು ಮಾಡುತ್ತಿರುವ ನಿಖಿಲ್ ದೇವಾಡಿಗ ಇವರ ಸಹೋದರಿ. ವಿದ್ಯಾವಂತ ಕುಟುಂಬದ ಹುಟ್ಟು ಪ್ರತಿಭೆಯಾದ ನೇಹ ಬೆಂಗಳೂರಿನ ಅಮೇರಿಕನ್ ಮೂಲದ ಖ್ಯಾತ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಇವರ ಸಾಧನೆ ನಮ್ಮೂರಿಗೆ ಕೀರ್ತಿ ತಂದಿದೆ. ಅವರ ಕಲಾ ಬದುಕು ವೃತ್ತಿ ಬದುಕು ಮತ್ತು ಮುಂದಿನ ಭವಿಷ್ಯದ ವೈವಾಹಿಕ ಬದುಕು ಬಂಗಾರವಾಗಲಿ ಅವರಿಗೆ ಹಿರಿಯರ ಮತ್ತು ಅಭಿಮಾನಿಗಳ ದೇವರ ಆಶೀರ್ವಾದವಿರಲಿ ಎಂಬ ಹಾರೈಕೆಯೊಂದಿಗೆ ಅಭಿನಂದನೆಗಳು.