spot_img
25.6 C
Udupi
Monday, December 4, 2023
spot_img
spot_img
spot_img

ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 14.50 ಲಕ್ಷ ಮೌಲ್ಯದ ಚಿನ್ನದ ಪೌಡರ್‌ ವಶ

ಮಂಗಳೂರು: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 242 ಗ್ರಾಂ ತೂಕದ, 14.50 ಲಕ್ಷ ರೂ ಮೌಲ್ಯದ ಚಿನ್ನದ ಪೌಡರ್‌ನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಏರ್‌ಇಂಡಿಯಾ ವಿಮಾನದಲ್ಲಿ ಬರುತ್ತಿದ್ದ ಪ್ರಯಾಣಿಕ ಚಿನ್ನದ ಪುಡಿಯನ್ನು ರಟ್ಟಿನ ಬಾಕ್ಸ್‌ನೊಳಗೆ ನಾಲ್ಕು ಕಾರ್ಬನ್‌ ಪೇಪರ್‌ಗಳಲ್ಲಿ ಸುತ್ತಿಟ್ಟು ಸಾಗಿಸುತ್ತಿದ್ದ. ಸಂಶಯದ ಮೇರೆಗೆ ಪರಿಶೀಲಿಸಿದಾಗ ಈ ಅಕ್ರಮ ಚಿನ್ನದ ಸಾಗಾಟ ಜಾಲ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles