ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ (R) ಇವರ
ಜಂಟಿ ಆಶ್ರಯದಲ್ಲಿ ದಿನಾಂಕ 11-10-2024 ನೇ ಶುಕ್ರವಾರ ಮತ್ತು12-10-2024ನೇ ಶನಿವಾರದಂದು ಬೆಂಗಳೂರಿನ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ, ಡಾ.ಪುನೀತ್ ರಾಜ್‌ಕುಮಾರ್ ಮೈದಾನ, ವೆಂಕಟೇಶ್ವರಪ್ಪ ಲೇಔಟ್ ಇಲ್ಲಿ ನಡೆದ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗುರುತಿಸಲ್ಪಟ್ಟ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿಯಿಂದ ಆಯೋಜಿಸಲಾದ 7 ನೇ ಇಂಟರ್ ಕ್ಲಬ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿ 2024 ಇದರಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಅಮೆಚೂರ್ ಬ್ಯಾಕ್ಸಿಂಗ್ ಕೌನ್ಸಿಲ್ನ ಕುಂದಾಪುರದ ಹತ್ತು ಸ್ಪರ್ಧಿಗಳು ಭಾಗವಹಿಸಿ “1 ಚಿನ್ನದ ಪದಕ 3 ಬೆಳ್ಳಿಯ ಪದಕ 6 ಕಂಚಿನ ಪದಕ” ಗೆಲ್ಲುವ ಮೂಲಕ ಜಿಲ್ಲೆಗೆ ಅತೀ ದೊಡ್ಡ ಕೀರ್ತಿಯನ್ನು ತಂದಿರುತ್ತಾರೆ.
ಸ್ಪರ್ಧಿಗಳು ಗೃಷ್ಮೇಶ್ ಕುಂದರ್ ಕೋಟ ಮತ್ತು ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪದಕವನ್ನು ಗೆದ್ದ ಹತ್ತು ಸ್ಪರ್ಧಿಗಳ ವಿವರ ಹೀಗಿದೆ…
1.ತನುಷ್ ಎಂ ಭಂಡಾರಿ
ಚಿನ್ನದ ಪದಕ 🥇
26-28 ಕೆಜಿ ಕಬ್ ಗ್ರೂಪ್ ಎ ಹುಡುಗರ ವಿಭಾಗ
2.ತೇಜಸ್ ಎ
ಬೆಳ್ಳಿ ಪದಕ 🥈
81+ ಕೆಜಿ ಜೂನಿಯರ್ ಬಾಲಕರ ವಿಭಾಗ
3.ಶಿಖಾ ಬಿಜೂರ್
ಬೆಳ್ಳಿ ಪದಕ 🥈
50+ KG ಕಬ್ ಗುಂಪು A ಹುಡುಗಿಯರ ವಿಭಾಗ
4.ಶ್ರೀಶಾ
ಬೆಳ್ಳಿ ಪದಕ 🥈
32-34 KG ಕಬ್ ಗುಂಪು A ಹುಡುಗರ ವಿಭಾಗ
5.ರೋಹನ್
ಕಂಚಿನ ಪದಕ🥉
50-52KG ಜೂನಿಯರ್ ಬಾಲಕರ ವಿಭಾಗ
6.ಸಂಭ್ರಮ್ ಎಸ್
ಕಂಚಿನ ಪದಕ🥉
18-20 KG ಕಬ್ ಗುಂಪು D ಹುಡುಗರ ವಿಭಾಗ
- ಸದ್ವಿನ್ ಶೆಟ್ಟಿ
ಕಂಚಿನ ಪದಕ🥉
50+ KG ಕಬ್ ಗುಂಪು A ಹುಡುಗರ ವಿಭಾಗ - ಯಶ್ಚಿತ್ ಶೆಟ್ಟಿ
ಕಂಚಿನ ಪದಕ🥉
54-57 ಕೆಜಿ ಜೂನಿಯರ್ ಬಾಲಕರ ವಿಭಾಗ - ದಿಗಂತ್ ಕೆ
ಕಂಚಿನ ಪದಕ🥉
38-40 ಕೆಜಿ ಕಬ್ ಗ್ರೂಪ್ ಎ ಹುಡುಗರ ವಿಭಾಗ - ದಿವಿತ್ ಸುಜಿತ್ ಕುಮಾರ್
ಕಂಚಿನ ಪದಕ🥉
44-46 ಕೆಜಿ ಜೂನಿಯರ್ ಬಾಲಕರ ವಿಭಾಗ
ಪದಕವನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಂತಹ ಎಲ್ಲಾ ಸ್ಪರ್ದಾಳುಗಳಿಗೂ ಜಿಲ್ಲೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳು. ಹಾಗೆಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಪೋಷಕರವರ ಆದ್ಯ ಕರ್ತವ್ಯ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡಿ ಒಂದು ಉತ್ತಮ ವೇದಿಕೆ ಸಿಕ್ಕರೆ ಇಂತಹ ಸಾಧನೆಗಳನ್ನು ಮಾಡಬಲ್ಲರು ಎಂದು ಹೆಮ್ಮೆಯಿಂದ ಹೇಳಬಹುದು. ಅದಕ್ಕಾಗಿ ಪೋಷಕರಲ್ಲಿ ವಿನಂತಿ ತಮ್ಮ ಮಕ್ಕಳಲ್ಲಿ ಯಾವ ಪ್ರತಿಭೆ ಇದ್ದರೂ ಸಹ ಅವರನ್ನು ಅಂತಹ ವೇದಿಕೆ ಹತ್ತಲು ಅವಕಾಶ ಕೊಡಿ, ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇಟ್ಟುಕೊಳ್ಳಿ ಎಂಬುವುದು ಕೋಚ್ ಗೃಷ್ಮೇಶ್ ಕುಂದರ್ ಕೋಟ ಹಾಗೂ ಅಕ್ಷಯ್ ಹೆಮ್ಮಾಡಿಯವರ ಅಭಿಪ್ರಾಯವಾಗಿದೆ.