26.6 C
Udupi
Tuesday, November 29, 2022
spot_img

ಚಿನ್ನ ಕಳ್ಳ ಸಾಗಾಣಿಕೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ, 2,398 ಗ್ರಾಂ ಚಿನ್ನ ವಶ

ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ವಶಕ್ಕೆ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಆತನಿಂದ 2,398 ಗ್ರಾಂ ತೂಕದ ಚಿನ್ನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ ಖಚಿತ ಮಾಹಿತಿ ಮೇರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದಿಳಿದ ಪ್ರಯಾಣಿಕನನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಭಾರಿ ಪ್ರಮಾಣದ ಚಿನ್ನ ಕಳ್ಳ ಸಾಗಾಣಿಕೆ ಬೆಳಕಿಗೆ ಬಂದಿದೆ.
ವಶಕ್ಕೆ ಪಡೆದ ವ್ಯಕ್ತಿಯ ಬಳಿ 15 ಚಿನ್ನದ ಬಿಸ್ಕತ್, 2 ಚಿನ್ನದ ಕಟ್ ಪೀಸ್, 4 ಚಿನ್ನದ ಕಡ್ಡಿ ಪತ್ತೆಯಾಗಿವೆ.
ಪ್ರಕರಣ ಸಂಬಂಧ ವ್ಯಕ್ತಿಯನ್ನು ಬಂಧಿಸಿ, 2,398 ಗ್ರಾಂ ಚಿನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles