Tuesday, April 22, 2025
Homeಬೆಂಗಳೂರುಅತ್ತೆ ಮನೆಯಲ್ಲೇ ಚಿನ್ನ ಕದ್ದು ಬಂಧಿತನಾದ ಅಳಿಯ!

ಅತ್ತೆ ಮನೆಯಲ್ಲೇ ಚಿನ್ನ ಕದ್ದು ಬಂಧಿತನಾದ ಅಳಿಯ!

ಬೆಂಗಳೂರು: ಅತ್ತೆಯ ಮನೆಯಲ್ಲೇ ಚಿನ್ನಾಭರಣ ಕದ್ದ ಅಳಿಯ ಈಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಬಂಧಿತನಿಂದ 3.8 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಲಗ್ಗೆರೆಯ ನಾಗಮ್ಮ ತಮ್ಮ ಮಗಳನ್ನು ಪರಶುರಾಮ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು. ಪರಶುರಾಮ ಯಾವುದೇ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಜು. 6ರಂದು ನಾಗಮ್ಮ ಹಾಗೂ ಮಗಳು ದೇವಾಲಯಕ್ಕೆ ಹೋಗಿದ್ದ ವೇಳೆ ಪರಶುರಾಮ ಮನೆಯಲ್ಲಿ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ. ಈ ಬಗ್ಗೆ ತಾಯಿ-ಮಗಳು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಲಗ್ಗೆರೆ ಮುಖ್ಯರಸ್ತೆಯ ಏಟ್ರಿಯಾ ಹೋಟೆಲ್‌ ಬಳಿ ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular