ಸಹಾಯಹಸ್ತ ಲೋಕ ಸೇವಾ ಟ್ರಸ್ಟಿನ ಮನವಿ ಮೇರೆಗೆ ಗೋಲ್ಡನ್ ಟೆಕ್ ಕನ್ಸ್‌ಸ್ಟ್ರಟಿಂಗ್ ಕಂಪನಿ ವತಿಯಿಂದ ಕಂಪನಿಯ ಸೌತ್ ಝೋನ್ ಪ್ರಮೋಟರ್ ಸೋಮನಾಥ ಪೂಜಾರಿ ಇವರ ನೇತೃತ್ವದಲ್ಲಿ ಮೂಡುಬಿದಿರೆ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರ ಇಲ್ಲಿಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉಚಿತವಾಗಿ ಕಂಪನಿಯ ಪಾಲಿಸಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಮದ್ಯಾಹ್ನದ ಭೋಜನೆ ವ್ಯವಸ್ಥೆ ಕಂಪನಿ ಕಡೆಯಿಂದ ಮಾಡಲಾಯಿತು. ಸಂಸ್ಥೆಯ ಮುಖ್ಯಸ್ಥರು ಆಗಿರುವ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಭಿನ್ನ ಸಾಮರ್ಥ್ಯದ ಮಕ್ಕಳು ಹೂ ಗುಚ್ಛ ನೀಡಿ ಅಭಿನಂದಿಸಿದರು. ಸೋಮನಾಥ ಪೂಜಾರಿಯವರು ಪಾಲಿಸಿಯಿಂದ ಬರುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಸಹಾಯಹಸ್ತ ಲೋಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ಮನೋಹರ್ ಪಲಯಮಜಲು ಹಾಗೂ ಪ್ರದೀಪ್ ಉಕ್ಕುಡ, ಕಂಪನಿ ಡಿಸ್ಟ್ರಿಬ್ಯೂಟರ್ ಗಳಾದ ಪದ್ಮನಾಭ ಸುಳ್ಯ, ಜನಾರ್ಧನ ಆಚಾರ್ಯ, ಯತೀಶ್ ಸುಳ್ಯ, ಸುದೀಪ್ ಚೊಕ್ಕಡಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.