ದಿನಾಂಕ 27-03-2025ನೇ ಗುರುವಾರ ಸಂಜೆ ಗಂಟೆ 6 ರಿಂದ ನಮ್ಮ ಹಿರಿಯರಾದ ದಿ| ಚೀಂಕ್ರ ನಾಯ್ಕ, ದಿ| ಪೂವ ನಾಯ್ಕ ಮತ್ತು ದಿ| ಸಂಜೀವ ನಾಯ್ಕ ಇವರ ಕಾಲದಿಂದ ಅಲಿಮಾರು ಕುಟುಂಬದ ಮನೆಯಲ್ಲಿ ಆರಾಧಿಸಿಕೊಂಡು ಬಂದಿರುವ, ಗೋಂದೋಲು ಪೂಜೆ, ಬೈರವ ಪೂಜೆ ಹಾಗೂ ಹಿರಿಯಜ್ಜ, ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಟುಂಬದ ಪಂಜುರ್ಲಿ, ಗುಳಿಗ ಪಂಜುರ್ಲಿ ದೈವಗಳ ಗಗ್ಗರ ಸೇವೆ ನಡೆಯಲಿದೆ.
ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸುಮಿತ್ರ ನಾಯ್ಕ್ ಮತ್ತು ಮಕ್ಕಳು, ತಿಳಿಸಿರುತ್ತಾರೆ.