ಕೆಲವರಿಗೆ ದಿನವಿಡೀ ನಿದ್ದೆ ಮಾಡಿದರೂ ನಿದ್ದೆ ಸಾಕೆನಿಸುವುದಿಲ್ಲ. ಅಂತಹವರಿಗೊಂದು ಬೆಂಗಳೂರಿನಲ್ಲಿ ಒಳ್ಳೆಯ ಆಫರ್ ಇದೆ. ದಿನದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ, ಮಲಗುವ ಕೆಲಸಕ್ಕೆ 10 ಲಕ್ಷ ರೂ. ವೇತನ ಪಡೆಯುವ ಅತ್ಯದ್ಭುತ ಕೆಲಸ. ಇದು ನಿಜಕ್ಕೂ ನಿದ್ದೆಪ್ರಿಯರ ನೆಚ್ಚಿನ ಉದ್ಯೋಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೌದು ದಿನಕ್ಕೆ 8 ಗಂಟೆಗಳ ಕಾಲ ಮಲಗಿ, 10 ಲಕ್ಷ ಸಂಪಾದಿಸುವ ಅವಕಾಶವನ್ನು ಕಂಪನಿಯೊಂದು ನೀಡಿದ್ದು, ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪೆನಿ ವೇಕ್‌ಫಿಟ್ ಈ ಭರ್ಜರಿ ಜಾಬ್ ಆಫರ್ ನೀಡಿದೆ. ಈ ಹಾಸಿಗೆ ಕಂಪೆನಿ ಮಲಗುವ ಕೆಲಸವನ್ನು ಸೃಷ್ಟಿಸಿದ್ದು, ವೇಕ್‌ಫಿಟ್ ಕಂಪೆನಿ ತಯಾರಿಸುವ ಹಾಸಿಗೆಯಲ್ಲಿ ಮಲಗುವ ಮೂಲಕ ನಿದ್ರೆ ಹೇಗೆ ಬರುತ್ತದೆ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವುದೇ ಕೆಲಸವಾಗಿದೆ. ಈ ಹಿಂದೆಯೂ ಈ ಕಂಪೆನಿ ಈ ಜಾಬ್ ಆಫರ್ ನೀಡಿತ್ತು. ಇದೀಗ ನಾಲ್ಕನೇ ಬಾರಿ ʼಸ್ಲೀಪ್ ಇಂಟರ್ನ್ʼ ಜಾಬ್ ಆಫರ್ ನೀಡಿದ್ದು, 8 ಗಂಟೆಗಳ ಕಾಲ ಮಲಗುವ ಕೆಲಸಕ್ಕೆ 10 ಲಕ್ಷ ವೇತನ ಪಡೆಯುವ ಅವಕಾಶವನ್ನು ನೀಡಿದೆ. 3ನೇ ಸೀಸನ್‌ನಲ್ಲಿ ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಎಂಬವರು ಈ ಉದ್ಯೋಗದಲ್ಲಿ ಗೆದ್ದು 9 ಲಕ್ಷ ರೂ. ಗೆಲ್ಲುವುದರ ಜೊತೆಗೆ ʼದಿ ಸ್ಲೀಪ್ ಚಾಂಪಿಯನ್ʼ ಎಂಬ ಬಿರುದನ್ನು ಗಳಿಸಿದ್ದರು. ಇದೀಗ ಈ ಕಂಪೆನಿ 8 ಗಂಟೆಗಳ ಕಾಲ ನಿದ್ದೆ ಮಾಡಿ 10 ಲಕ್ಷ ಗೆಲ್ಲುವ ಭರ್ಜರಿ ಆಫರ್ ನೀಡಿದೆ.
ಈ ಉದ್ಯೋಗಕ್ಕೆ ಬೇಕಾದ ಅರ್ಹತೆ, ಅಭ್ಯರ್ಥಿ, ಸಂಬಳ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವೇಕ್‌ಫಿಟ್ ಲಿಂಕ್ಡ್ ಇನ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಪೋಸ್ಟ್ ಹೆಸರು: ಪ್ರೊಫೆಷನಲ್ ಸ್ಲೀಪ್ ಇಂಟರ್ನ್
ಕೆಲಸದ ಸ್ಥಳ: ಹಾಸಿಗೆ
ಅವಧಿ: 2 ತಿಂಗಳುಗಳು
ಈ ಇಂಟರ್ನ್‌ಶಿಪ್ ಅಲ್ಲಿ ಮಾಡಬೇಕಾದ ಕೆಲಸಗಳೇನು?
ಪ್ರತಿ ರಾತ್ರಿ 8 ರಿಂದ 9 ಗಂಟೆಗಳ ಕಾಲ ವೇಕ್‌ಫಿಟ್ ಹಾಸಿಗೆಯಲ್ಲಿ ಉತ್ತಮ ನಿದ್ರೆಯನ್ನು ಮಾಡುವುದು
ಹಗಲು ಹೊತ್ತಿನಲ್ಲಿ 20 ನಿಮಿಷಗಳ ಕಾಲ ಕಿರು ನಿದ್ರೆ (ಪವರ್ ನ್ಯಾಪ್) ಮಾಡುವುದು
ಅಭ್ಯರ್ಥಿಯ ಅರ್ಹತೆ:
ಪ್ರತಿರಾತ್ರಿ ಒಂದೇ ಸಮಯಕ್ಕೆ ಮಲಗುವವರು ಅರ್ಜಿ ಸಲ್ಲಿಸಬಹುದು.
20 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
ಮುಖ್ಯವಾಗಿ ನಿದ್ದೆ ಮಾಡುವುದನ್ನು ಇಷ್ಟಪಡುವವರಾಗಿರಬೇಕು.
ಯಾವುದೇ ವಿಭಾದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿಯನ್ನು ಪೂರೈಸಿರಬೇಕು
ಸಂಬಳ:
ಆಯ್ದ ಸ್ಲೀಪ್ ಇಂಟರ್ನ್‌ಗಳಿಗೆ 1 ಲಕ್ಷ ರೂ. ಸಂಬಳ
ವರ್ಷದ ಸ್ಲೀಪ್ ಚಾಂಪಿಯನ್ ಎಂದು ಗುರುತಿಸಲ್ಪಟ್ಟ ಇಂಟರ್ನ್‌ಗೆ 10 ಲಕ್ಷದ ವರೆಗೆ ಸಂಬಳ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಈ ಉದ್ಯೋಗದಲ್ಲಿಆಸಕ್ತಿಯನ್ನು ಹೊಂದಿದ್ದರೆ ವೇಕ್‌ಫಿಟ್ ಅವರ ಅಫೀಶಿಯಲ್ ಲಿಂಕ್ಡ್‌ಇನ್ ಪುಟದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.wakefit.co/sleepintern/?srsltid=AfmBOoqgr_0rts2cvbWFWQCYqd_J8aHnxyFDEpYQgwa4IuBsjr0NHc7v