Wednesday, September 11, 2024
HomeTechnologyಆ.14ರಂದು ಗೂಗಲ್‌ನಿಂದ ಫೋಲ್ಡ್‌ ಮಾಡಬಹುದಾದ ಸ್ಮಾರ್ಟ್‌ ಫೋನ್‌ ಲೋಕಾರ್ಪಣೆ! | ದೊಡ್ಡ ಸ್ಕ್ರೀನ್‌ ಸಹಿತ ವಿಶೇಷತೆಗಳೇನು?

ಆ.14ರಂದು ಗೂಗಲ್‌ನಿಂದ ಫೋಲ್ಡ್‌ ಮಾಡಬಹುದಾದ ಸ್ಮಾರ್ಟ್‌ ಫೋನ್‌ ಲೋಕಾರ್ಪಣೆ! | ದೊಡ್ಡ ಸ್ಕ್ರೀನ್‌ ಸಹಿತ ವಿಶೇಷತೆಗಳೇನು?

ಸ್ಮಾರ್ಟ್ ​ಫೋನ್​ ಮಾರುಕಟ್ಟೆಯಲ್ಲಿ ಗೂಗಲ್​ ತನ್ನದೇ ಆದ ಜನಪ್ರಿಯತೆ ಹೊಂದಿದೆ. ಇದೀಗ ಗೂಗಲ್‌ ಗ್ರಾಹಕರಿಗಾಗಿ ಪಿಕ್ಸೆಲ್​ ವತಿಯಿಂದ ನಾಲ್ಕು ಸ್ಮಾರ್ಟ್ ​ಫೋನ್​ಗಳನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನ್‌ಗಳನ್ನು ಆ.14ರಂದು ಗೂಗಲ್ ರಿಲೀಸ್​​ ಮಾಡಲಿದೆ.
ಬಿಡುಗಡೆಗೊಳಿಸಲಿರುವ ನಾಲ್ಕು ಸ್ಮಾರ್ಟ್‌ ಫೋನ್‌ಗಳಲ್ಲಿ ಮಡಚಬಹುದಾದ ಫೋನನ್ನು ಗೂಗಲ್‌ ಪರಿಚಯಿಸುತ್ತಿದೆ. ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್​​ ಸ್ಮಾರ್ಟ್​ ಫೋನ್ ಮಡಚಬಹುದಾದ ಫೋನ್​ ಆಗಿದೆ. ಈಗ ಎಲ್ಲರ ಗಮನ ಈ ಫೋನ್‌ ಮೇಲೆ ಬಿದ್ದಿದೆ. ಗೂಗಲ್​ ಎಐ, ಜಿಮಿನಿಯೊಂದಿಗೆ ಈ ಫೋನ್‌ ಸಂಯೋಜಿಸಲಾಗಿದೆ.
ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್ ಕುರಿತಾಗಿ ಸ್ಪಷ್ಟವಾದ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ. ಆದರೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನೂತನ ಫೋನ್​ ಟೆನ್ಸರ್​ ಜಿ4 ಚಿಪ್​​ಸೆಟ್​ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತಿದೆ.
ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್ ದೊಡ್ಡದಾದ ಡಿಸ್​​ಪ್ಲೇಯೊಂದಿಗೆ ಬರಲಿದೆ. ಮಡಚಬಹುದಾದ ವಿನ್ಯಾಸವನ್ನು ಹೊಂದಿದೆ. 256ಜಿಬಿ ಮತ್ತು 512ಜಿಬಿ ಸಂಗ್ರಹಣ ಸಾಮರ್ಥ್ಯದೊಂದಿಗೆ ಪರಿಚಯಿಸಲಾಗುತ್ತದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 2152 x 2076 ಪಿಕ್ಸೆಲ್​​ ರೆಸಲ್ಯೂಶನ್​. 120HZ ರಿಫ್ರೆಶ್​​ ದರದೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಗ್ರಾಹಕರಿಗಾಗಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇನ್ನು ಇದರ ಬೆಲೆಯ ಬಗ್ಗೆ ಬಿಡುಗಡೆಗೊಂಡ ಬಳಿಕವಷ್ಟೇ ತಿಳಿದುಬರಬೇಕಿದೆ.

https://x.com/GoogleIndia/status/1814132980132323491?ref_src=twsrc%5Etfw%7Ctwcamp%5Etweetembed%7Ctwterm%5E1814132980132323491%7Ctwgr%5E35805b5a17cae500e7e701eefeec4d5bfa54f560%7Ctwcon%5Es1_&ref_url=https%3A%2F%2Fnewsfirstlive.com%2Fgoogle-pixel-9-pro-fold-launch-in-india-august-14%2F

RELATED ARTICLES
- Advertisment -
Google search engine

Most Popular