Saturday, July 20, 2024
Homeಧಾರ್ಮಿಕಗೋಪಾಲಕೃಷ್ಣ ಕಲಾ ವೇದಿಕೆ ಉಳ್ಳೂರು : ಅಶ್ವತ ಪ್ರತಿಷ್ಟೋಪನಯನ ವಿವಾಹ ವಾರ್ಷಿಕೋತ್ಸವ

ಗೋಪಾಲಕೃಷ್ಣ ಕಲಾ ವೇದಿಕೆ ಉಳ್ಳೂರು : ಅಶ್ವತ ಪ್ರತಿಷ್ಟೋಪನಯನ ವಿವಾಹ ವಾರ್ಷಿಕೋತ್ಸವ

ಗೋಪಾಲಕೃಷ್ಣ ದೇವಸ್ಥಾನ ಮೂಡುಮಠ ಹಾಗೂ ಗೋಪಾಲಕೃಷ್ಣ ಕಲಾ ವೇದಿಕೆ ಉಳ್ಳೂರು 11 ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಶ್ವತ ಪ್ರತಿಷ್ಟೋಪನಯನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿತು.

ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಪಾಲಕೃಷ್ಣ ಕಲವೇದಿಕೆ ಉಳ್ಳೂರು 11 ಇಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ರವೀಂದ್ರ ಉಡುಪ ಮೂಡುಮಠ ದೀಪ ಬೆಳಗಿಸಿ ಉದ್ಘಾಟಿಸಿದರು ಶುಭ ಹಾರೈಸಿದರು.

ಖಂಭದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿ ಮಕ್ಕಳ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಕ್ಷಗಾನ ಪರಿಪೂರ್ಣವಾದ ಕಲೆಯಾಗಿದ್ದು, ಇದು ಆರಾಧನಾ ಕಲೆಯಾಗಿ ಜನರ ಮನದಲ್ಲಿ ನೆಲೆ ನಿಂತಿದೆ. ಮಕ್ಕಳ ಸಮೂಹ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ.

ಯಕ್ಷಗಾನ ತರಬೇತಿದಾರರಾದ ಶಂಕರ್ ದೇವಾಡಿಗ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲು ಪ್ರಾರಂಭಿಸಿದ್ದು ನಾನು, ಯಕ್ಷಗಾನ ಕಲೆ ಉಳಿಸಲು ಸಣ್ಣ ಪ್ರಯತ್ನ ಮಾಡಿದೆ ಇಂದು ಎಲ್ಲಾಕಡೆಗೂ ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಯಕ್ಷಗಾನ ಗುರುಗಳಾದ ಶಂಕರ ದೇವಾಡಿಗ ಉಳ್ಳೂರು 11 ಇವರಿಗೆ ಗುರುವಂದನೆ ಸಲ್ಲಿಸಲಾಯಿತು, ಹಾಗೂ ಕಲಾವೇದಿಕೆಯ ನವೀಕರಣಕ್ಕೆ ಧನ ಸಹಾಯ (ಸುಮಾರು 78000) ಮಾಡಿದ ಗಣೇಶ ದೇವಾಡಿಗ ಹಾಡಿಮನೆ ದಂಪತಿಗಳನ್ನು ಗೌರವಿಸಲಾಯಿತು, ಹಾಗೂ ಅನ್ನ ಸಂತರ್ಪಣೆ ಸೇವೆಯನ್ನು ಮಾಡಿದ ಸದಾಶಿವ ದೇವಾಡಿಗ ಲಿಂಗಿಮನೆ ಇವರನ್ನು ಗೌರವಿಸಲಾಯಿತು, ನಂತರ ಕಲಾ ತಂಡದ ಸದಸ್ಯರಿಂದ ಹೆಜ್ಜೆ ಗೆಜ್ಜೆ _3 ಯಕ್ಷಗಾನ ಪ್ರದರ್ಶನ ಮಾಡಲಾಯಿತು, ಪ್ರಸಂಗ ರಾಜಾ ರುದ್ರಕೋಪ, ಸುಮಾರು 43 ಮಕ್ಕಳು ಭಾಗವಹಿಸಿದ್ದು ಭಾಗವತರಾಗಿ ದರ್ಶನ್ ಗೌಡ, ಮದ್ದಳೆಯಲ್ಲಿ ಮಹಾಬಲೇಶ್ವರ ಗೌಡ ಹಾಗೂ ಗಣೇಶ್ ಹೆಬ್ಬಾರ್ , ಚಂಡೆಯಲ್ಲಿ ಶಶಾಂಕ್ ಆಚಾರ್ಯ ಕಿರೀಮಂಜೇಶ್ವರ , ನಿರ್ದೇಶನ ಶಂಕರ ದೇವಾಡಿಗ ಹಾಗೂ ದಿನೇಶ್ ಆಚಾರ್ಯ ಉಳ್ಳೂರು 11 ಇವರು ಸಹಕರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಲಿಯಣ್ಣ ಶೆಟ್ಟಿ , ಸೀತಾರಾಮ ಶೆಟ್ಟಿ ಉದ್ದಿನಹಕ್ಕಲು, ಪ್ರಗತಿಪರ ಕೃಷಿಕರಾದ ಭುಜಂಗ ಶೆಟ್ಟಿ ಕುಕನಾಡು,CA ನಾಗರಾಜ್ ಪೂಜಾರಿ ಪಡುಮನೆ, ಸುರೇಶ ದೇವಾಡಿಗ ಹಾಡಿಮನೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ದಿನೇಶ್ ಆಚಾರ್ಯ ಉಳ್ಳೂರು 11 ನಿರೂಪಿಸಿದರು, ಅರುಣ್ ಗಾಣಿಗ ಸ್ವಾಗತಿಸಿದರು, ಭಾಸ್ಕರ ದೇವಾಡಿಗ ವಂದಿಸಿದರು.

RELATED ARTICLES
- Advertisment -
Google search engine

Most Popular