Monday, March 17, 2025
Homeಉಡುಪಿಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

ಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ 4ನೇ ಮುಖ್ಯರಸ್ತೆ ನಾಗಬನ ರಸ್ತೆ ಕೂಡುವ ಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ವಾಹನಗಳು ಪರಸ್ಪರ ಢಿಕ್ಕಿಯಾಗುವ ಘಟನೆಗಳು ಸಂಭವಿಸುತ್ತಿವೆ. ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಸದೇ ನೇರವಾಗಿ ಮಲ್ಪೆ ರಸ್ತೆಗೆ ಸಂಪರ್ಕಿಸುವ ಈ ಒಳರಸ್ತೆಯನ್ನು ದಿನನಿತ್ಯ ನೂರಾರು ಮಂದಿ ಬಳಸುತ್ತಾರೆ. ಈ ರಸ್ತೆಯು ಗೋಪಾಲಪುರ 4ನೇ ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಎಡ ಮತ್ತು ಬಲ ಭಾಗಗಳಿಂದ ವಾಹನಗಳು ಬರುವ ಬಗ್ಗೆ ಗೋಪಾಲಪುರ ಮುಖ್ಯರಸ್ತೆಯ ನಿವಾಸಿಗಳಿಗೆ ಮುನ್ಸೂಚನೆ ಇರುವುದಿಲ್ಲ. ಕೆಲವು ಮಂದಿ ವೇಗದಲ್ಲಿ ವಾಹನ ಚಲಾಯಿಸಿ ಅವಘಡಕ್ಕೆ ತುತ್ತಾಗುವುದು ಮಾತ್ರವಲ್ಲದೇ, ಇಲ್ಲಿ ವಾಹನ ಸವಾರರು ಹಾರ್ನ್ ಹಾಕದೇ ಬರುವುದು ಮತ್ತೊಂದು ತಲೆಬಿಸಿಯಾಗಿದೆ.

ಇದನ್ನು ಮನಗಂಡ ಸ್ಥಳೀಯರು, ವಾಹನ ಸವಾರರಿಗೆ ಮುನ್ಸೂಚನೆ ನೀಡುವ, ಸುಗಮ ಸಂಚಾರದ ಸಂದೇಶವಿರುವ ಎಚ್ಚರಿಕೆಯ ಫಲಕವನ್ನು ‘ಉಡುಪಿಗೆ ಬನ್ನಿ’ ಮತ್ತು ‘ಗೋಪಾಲಪುರ ಸಿಟಿಜನ್ಸ್ ಫೋರಮ್’ ಸಹಕಾರದಲ್ಲಿ ಗುರುವಾರ ಅಳವಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಚಂದ್ರಕಾಂತ್ ನಾಯ್ಕ್, ನಂದಕಿಶೋರ್, ಉದ್ಯಮಿ ಸುರೇಶ್ ಶೆಟ್ಟಿ, ಮಂಜುನಾಥ್ ನಾಯ್ಕ್, ದಿವಾಕರ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಜೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular