ಗೋ ಪೂಜೆಯ ಆಚಾರ ವಿಚಾರಗಳನ್ನು ತಿಳಿಯಿರಿ – ಕೃಷಿಕ ಅಶೋಕ್ ಕುಂದರ್ ಭಾರತ ಸರಕಾರ,
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ,ಮಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ ಪರ್ಬ -2024 ಇದರ ಅಂಗವಾಗಿ ಕೃಷಿಕರ ಬೆನ್ನೆಲುಬಾಗಿರುವ ಗೋವಿನ ಪೂಜೆಯ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಟಿ.ಕೆ ಮಧುಸೂದನ ಆಚಾರ್ಯ ಇವರು ಗೋವುಗಳಿಗೆ ವಸ್ತ್ರವನ್ನು ಹೊದೆಸಿದರು.
▪ ಕಾರ್ಯಕ್ರಮದ ಅಧ್ಯಕ್ಷರಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ಗಣೇಶ್ ಇವರು ಗೋಮಾತೆಗೆ ಹೂವಿನ ಹಾರ ಹಾಕಿದರು. ▪ಸಂಸ್ಥೆಯ ಮಹಿಳಾ ಕಾರ್ಯಾಧ್ಯಕ್ಷೆ ಹಾಗೂ ಸದಸ್ಯೆಯರು ಗೋವುಗಳಿಗೆ ಅರಸಿನ,ಕುಂಕುಮವಿಟ್ಟು,ಆರತಿ ಎತ್ತಿ,ಹಾಡುಗಳನ್ನು ಹಾಡಿದರು ನಂತರ ಬಾಳೆಹಣ್ಣು ತಿನ್ನಿಸಿ ಗೋಪೂಜೆಯನ್ನು ನೆರವೇರಿಸಿದರು.
▪ ಅತಿಥಿಗಳಾದ ಗ್ರಾಮದ ಕೃಷಿಕರು,ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ಕುಂದರ್ ಇವರು ಗೋವಿನ ಪೂಜೆಯ ವಿಧಾನಗಳನ್ನು ತಿಳಿಸಿದರು. ▪ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುರಾಜ್ ಪೂಜಾರಿ,ಗ್ರಾಮದ ಹಿರಿಯ ಕೃಷಿಕರಾದ ಜಯ ಶೆಟ್ಟಿ ಮೂಡುಮನೆ,ಸಂಸ್ಥೆಯ ಗೌರವಾಧ್ಯಕ್ಷರು ಪ್ರಶಾಂತ್ ಕುಮಾರ್ ಬೇಕಲ್,ಅಧ್ಯಕ್ಷರು ದೀಪಕ್ ಸುವರ್ಣ,ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ,ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್,ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾಗಿರುವ ಯೋಗೀಶ್ ಕೋಟ್ಯಾನ್,ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್,ಕ್ಲಬ್ ನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ,ಕೋಶಾಧಿಕಾರಿ ಸುನಿಲ್ ದೇವಾಡಿಗ,ಲೆಕ್ಕ ಪರಿಶೋಧಕ ಸುಭಾಷ್ ಅಮೀನ್, ಆರೋಗ್ಯ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್,ಕ್ರೀಡಾ ಕಾರ್ಯದರ್ಶಿ ಯೂನೂಸ್,ಹಿಮಕರ ಕೋಟ್ಯಾನ್,ರಮ್ಯಾ ಹಿಮಕರ ಹಾಗೂ ಸಂಸ್ಥೆಯ ಪದಾಧಿಕಾರಿಗಳು,ಸದಸ್ಯರು, ಸದಸ್ಯೆಯರು,ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದು, ಯಶೋಧ ಆರ್ ಸುವರ್ಣ,” ಶ್ರೀ ಸನ್ನಿಧಿ” ಇವರು ಗೋವುಗಳನ್ನು ನೀಡಿ ಸಹಕರಿಸಿ ಗೋಪೂಜೆಯಲ್ಲಿ ಪಾಲ್ಗೊಂಡರು.
▪ ಜೊತೆ ಕಾರ್ಯದರ್ಶಿ ಕಾರ್ಯದರ್ಶಿ ಚಂದ್ರ ಸುವರ್ಣ ವಂದಿಸಿದರು,
▪ ಅಧ್ಯಕ್ಷ ದೀಪಕ್ ಸುವರ್ಣ ಸ್ವಾಗತಿಸಿದರು. ▪ ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಸದಾನಂದ ಕಾರ್ಯಕ್ರಮ ನಿರೂಪಿಸಿದರು.