ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ )ಕಾಟಿಪಳ್ಳ ಗಣೇಶಪುರ ಇದರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಜಾರಂದಾಯ ಕೇಶವ ಶಿಶುಮಂದಿರದಲ್ಲಿ ದಿನಾಂಕ 19-11-2024 ರಂದು ಮಂಗಳವಾರ ಸಂಜೆ 5 ಗಂಟೆಗೆ ಗೋಪೂಜೆ, ತುಳಸಿ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ ಶ್ಲೋಕ, ವಚನಗಳು, ಮಂಕುತಿಮ್ಮನ ಕಗ್ಗವನ್ನು ಹೇಳಿಸಲಾಯಿತು. ಮಕ್ಕಳು, ಪೋಷಕರು ವರಮಹಾಲಕ್ಷ್ಮಿ ಸಮಿತಿ ಸದಸ್ಯರು ಎಲ್ಲರೂ ಸೇರಿ ದೀಪವನ್ನು ಹೊತ್ತಿಸಿ, ತುಳಸಿ ಪೂಜೆ ಹಾಗೂ ಗೋ ಪೂಜೆಯನ್ನು ಮಾಡಿದರು. ಶ್ರೀಯುತ ಶ್ರೇಯಸ್ ಮಹಾನಗರ ಕಾರ್ಯಕಾರಿಣಿ ಸದಸ್ಯರು ಇವರು ಪೂಜೆಯ ಮಹತ್ವವನ್ನು ತಿಳಿಸಿದರು. ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಜಯಕುಮಾರ್ ಹಾಗೂ ಶಿಶುಮಂದಿರದ ಅಧ್ಯಕ್ಷರಾದ ಮಧುಸೂದನ್ ರಾವ್, ವರಮಹಾಲಕ್ಷ್ಮೀ ಪೂಜನ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಿಶುಮಂದಿರದ ಸಮಿತಿಯ ಸದಸ್ಯರು, ಬಾಲಗೋಕುಲದ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಿಹಿ ತಿಂಡಿ ವಿತರಿಸಿ ಪಟಾಕಿಯನ್ನು ಸಿಡಿಸಲಾಯಿತು.