ಹಾವೇರಿ: ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಜೊತೆ ಸರ್ಕಾರಿ ವೈದ್ಯ ಅಸಭ್ಯವಾಗಿ ವರ್ತಿಸಿರುವಂತಹ ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆ ವೈದ್ಯ ಪರಸಪ್ಪ ಚುರ್ಚಿಹಾಳ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಫೆಬ್ರವರಿ 13ರಂದು ವೈದ್ಯ ಪರಸಪ್ಪ ಚುರ್ಚಿಹಾಳನಿಂದ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಹಾವೇರಿ ಮಹಿಳಾ ಠಾಣೆಯಲ್ಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆ ದೂರು ದಾಖಲಿಸಿದ ಬಳಿಕ ವೈದ್ಯನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ವೈದ್ಯರ ಮನೆಗಳಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಅದರಂತೆ ವೈದ್ಯ ಪರಸಪ್ಪ ಚುರ್ಚಿಹಾಳ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಸೊಂಟಕ್ಕೆ ಕೈ ಹಾಕಿ, ಎಳೆದಾಡಿ, ಸೀರೆ ಬಿಚ್ಚಲು ಯತ್ನಿಸಿದ್ದು, ತಪ್ಪಿಸಿಕೊಂಡು ಬಂದ ಮಹಿಳೆಗೆ ವೈದ್ಯನಿಂದ ಜಾತಿ ನಿಂದನೆ ಆರೋಪ ಮಾಡಿದ್ದಾರೆ.
ಬಳಿಕ ವೈದ್ಯನ ವರ್ತನೆಗೆ ಬೇಸತ್ತು ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಸದ್ಯ ವೈದ್ಯನ ಅಮಾನತು ಮಾಡುವಂತೆ ಹಾವೇರಿ ಜಿಲ್ಲಾಸ್ಪತ್ರೆ ಮುಂದೆ ಧರಣಿ ಮಾಡಿದ್ದಾರೆ.