Monday, March 17, 2025
HomeUncategorized೨೦೨೪- ೨೦೨೯ ನೇ ಅವಧಿಗೆ ಸರಕಾರ ನೌಕರರ ಸಂಘದ ಚುನಾವಣೆ

೨೦೨೪- ೨೦೨೯ ನೇ ಅವಧಿಗೆ ಸರಕಾರ ನೌಕರರ ಸಂಘದ ಚುನಾವಣೆ


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ೨೦೨೪-೨೦೨೯ನೇ ಅವಧಿಗೆ ತಾಲೂಕು ನಿರ್ದೇಶಕರ, ಆಯ್ಕೆಗಾಗಿ ಚುನಾವಣೆ ಘೋಷಣೆ ಮಾಡಿದ್ದು ನಾಮ ಪತ್ರ ಸಲ್ಲಿಕೆ ಪ್ರಾರಂಭಗೊಂಡಿರುತ್ತದೆ. ಮೂಡುಬಿದಿರೆ ಸರಕಾರಿ ಹಿರಿಯ ಪ್ರಾಥಮಿಕ ಮೂಡುಬಿದಿರೆ ೩ ಈ ಶಾಲೆಯ ಒಂದು ಕೊಠಡಿ ಸಂಘದ ಕಛೇರಿಯಾಗಿದ್ದು ಇಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ. ತಾಲೂಕು ಚುನಾವಣಾಧಿಕಾಯಾಗಿ ಶ್ರೀ ಶೀನ ನಾಯ್ಕ ನಿವೃತ್ತ ಮುಖ್ಯ ಶಿಕ್ಷಕರು ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಅ ೧೮ ರ ಸಂಜೆ ೫.೦೦ ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಅ ೧೯ ರಂದು ಬೆಳ್ಳಿಗೆ ೧೧ ಗಂಟೆಯಿಂದ ನಾಮ ಪತ್ರ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟನೆ ಅ ೨೧ ಸಂಜೆ ೪.೩೦ ಗಂಟೆಯವರೆಗೆ ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಸಂಜೆ – ೫.೩೦ಕ್ಕೆ ನಂತರ ಚುನಾವಣೆ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟಣೆ. ಚುನಾವಣೆ ಇದ್ದರೆ ಅ ೨೮ ಬೆಳ್ಳಿಗೆ ೯.೦೦ ರಿಂದ ಸಂಜೆ ೪.೦೦ ಗಂಟೆಯವರೆಗೆ ಮೂಡಬಿದ್ರಿ -೩ ಶಾಲೆಯಲ್ಲಿ ನಡೆಯಲಿರುವುದು. ನಂತರ ಮತ ಎಣಿಕೆ ಮುಕ್ತಾಯದ ನಂತರ ಫಲಿತಾಂಶ ಪ್ರಕಟನೆವಾಗಲಿದೆ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular