ಸರಕಾರಿ ಪ್ರೌಢ ಶಾಲೆ ಅಳದಂಗಡಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ 2024-25 ಕಾರ್ಯಕ್ರಮ ಜೂ.8 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿಯ ಹೆಸರಾಂತ ವೈದ್ಯರಾದ ಡಾ. ಎನ್. ಎಂ. ತುಳುಪುಲೆ ಇವರು ನಡೆಸಿದ್ದು ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಂತಿ ಮರಿಯಾ ಸಲ್ಡನ ಮುಖ್ಯ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮನೋಹರ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂದೀಪ್ ನೀರಲ್ಕೆ, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರು ಆಗಿರುವ ರಾಜೇಶ್ ಕುಲಾಲ್, ಶಾಲೆಯ ಶಿಕ್ಷಕರು ಆಗಿರುವ ಉಮೇಶ್, ಲಲಿತ , ಪ್ರೇಮಲತಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ವಾಗತ ಮನೋಹರ್ ಕುಮಾರ್ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರ ಶೇಖರ್ ರಾವ್ ಇವರು ನಡೆಸಿ ರಾಜೇಶ್ ಇವರು ಎಲ್ಲರಿಗೂ ಧನ್ಯವಾದ ನೀಡದರು. ಮಕ್ಕಳಿಗೆ ಬೇರೆ ರೀತಿಯ ಸ್ಪರ್ಧೆಗಳನ್ನು ಮಾಡಿಸಿ ಅದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.