Wednesday, July 24, 2024
Homeರಾಜ್ಯಸರ್ಕಾರಿ ಪ್ರೌಢಶಾಲೆ ಕೆದ್ದು ಅಳದಂಗಡಿ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಸರ್ಕಾರಿ ಪ್ರೌಢಶಾಲೆ ಕೆದ್ದು ಅಳದಂಗಡಿ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಬೆಳ್ತಂಗಡಿ : ಸರ್ಕಾರಿ ಪ್ರೌಢಶಾಲೆ ಕೆದ್ದು ಅಳದಂಗಡಿ ಬೆಳ್ತಂಗಡಿ ತಾಲೂಕು ಶಾಲಾ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವು ಎಸ್.‌ ಡಿ. ಎಂ. ಸಿ. ಕಾರ್ಯಧ್ಯಕ್ಷರಾದ ಸುರೇಂದ್ರ ಜೈನ್‌ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಅಮೋಘ ಸಾಧನೆ ತೋರಿ ಸರ್ವರಿಗೂ ಕೀರ್ತಿ ತಂದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಯಶೋಧರ ಸುವರ್ಣ ಮಾತಾನಾಡಿ ಮುಂದಿನ ದಿನದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶಾಂತಿ ಮತ್ತು ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular