Sunday, January 19, 2025
Homeಉಡುಪಿಸರಕಾರಿ ಒಳ ಕಾಡು ಉಡುಪಿ ಶಾಲಾ ವಾರ್ಷಿಕೋತ್ಸವ

ಸರಕಾರಿ ಒಳ ಕಾಡು ಉಡುಪಿ ಶಾಲಾ ವಾರ್ಷಿಕೋತ್ಸವ

ಉಡುಪಿ:  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳ ಕಾಡು ಉಡುಪಿ ಇಲ್ಲಿಯ ವಾರ್ಷಿಕೋತ್ಸವವು ಸಂಭ್ರಮದಿಂದ ಜ  04 ರಂದು ಶನಿವಾರ  ಜರುಗಿತು. ಈ ಸಂದರ್ಭದಲ್ಲಿ ವಿಜ್ಞಾನ ಮತ್ತು  ಗಣಿತ ಮೇಳ ಇದರ ಪ್ರದರ್ಶನವನ್ನು ನಿವೃತ್ತ ಶಿಕ್ಷಕಿ ಸವಿತಾ ದೇವಿ ಅವರು ಉದ್ಘಾಟಿಸಿದರು. ಕಲಾಮೇಳವನ್ನು ಶ್ರೀಯುತ ಎಂ ಆರ್ ಹೆಗಡೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉದ್ಘಾಟಿಸಿದರು ಹಾಗೂ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗೇಶ್ ಪ್ರಭು ಅವರು ಉದ್ಘಾಟಿಸಿದರು. ಶಾಲಾ ವಾರ್ಷಿಕ ಸಂಚಿಕೆಯಾದ “ಹೊಂಗಿರಣ” ಮತ್ತು  “ಚಿಗುರು “ಮಕ್ಕಳ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ  ಡಾ. ವಿರೂಪಾಕ್ಷ ಅವರು ವಹಿಸಿ ಮಕ್ಕಳು ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು. ವೇದಿಕೆಯಲ್ಲಿ ಅಮೃತ  ಶೆಣೈ ,  ಪ್ರಕಾಶ್ ಚಂದ್ರ ಸೌಮ್ಯ ಶೇಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಶಾಲಾ ನಾಯಕ ಫಜಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಮುಖ್ಯ ಶಿಕ್ಷಕಿ ಕುಸುಮ G ಮೆಂಡನ್ ಸ್ವಾಗತಿಸಿದರು.  ಸಹ ಶಿಕ್ಷಕಿ ಸುಮತಿ ವರದಿ ವಾಚಿಸಿದರು. ಸಹ ಶಿಕ್ಷಕಿ ವಸಂತಿ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಕುಮಾರಿ ಅನ್ವಿ,  ಪಂಚಮಿ ಹಾಗೂ ಸಹಶಿಕ್ಷಕಿ ಸುವಾಸಿನಿ ನೆರವೇರಿಸಿ ಕೊಟ್ಟರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.  ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ  ಶಿಕ್ಷಕ ವೃಂದ  ಹಾಗೂ  ಎಸ್ ಡಿ ಎಂ ಸಿಯ  ಪದಾಧಿಕಾರಿಗಳು ಸಂಪೂರ್ಣ ಸಹಕಾರವಿತ್ತು ಯಶಸ್ವಿಗೊಳಿಸಿದರು.

RELATED ARTICLES
- Advertisment -
Google search engine

Most Popular