Tuesday, April 22, 2025
HomeUncategorizedಭಾರತ ಸರ್ಕಾರದ ಹಿರಿಯ ನಾಗರಿಕರ ಉಳಿತಾಯ ಯೋಜನೆ ಈಗ ಎಚ್.ಡಿ.ಎಫ್.ಸಿ. ಬ್ಯಾಂಕ್ ಮೂಲಕ ಲಭ್ಯ

ಭಾರತ ಸರ್ಕಾರದ ಹಿರಿಯ ನಾಗರಿಕರ ಉಳಿತಾಯ ಯೋಜನೆ ಈಗ ಎಚ್.ಡಿ.ಎಫ್.ಸಿ. ಬ್ಯಾಂಕ್ ಮೂಲಕ ಲಭ್ಯ


ಮುಂಬೈ, ಮಾರ್ಚ್ 17, 2025: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಭಾರತ ಸರ್ಕಾರವು ಹಿರಿಯರಿಗೆ ರೂಪಿಸಿರುವ ಉಳಿತಾಯ ಸಾಧನ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್.ಸಿ.ಎಸ್.ಎಸ್.) ಅಡಿಯಲ್ಲಿ ಠೇವಣಿಗಳನ್ನು ಪಡೆಯುತ್ತಿರುವುದಾಗಿ ಇಂದು ಪ್ರಕಟಿಸಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಭಾರತ ಸರ್ಕಾರಕ್ಕೆ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ ಮತ್ತು ಸ್ಕೀಂನ ಠೇವಣಿಗಳನ್ನು ಪಡೆಯಲು ನೆರವಾಗುತ್ತದೆ, ಅಲ್ಲದೆ ಗ್ರಾಹಕರಿಗೆ ತಡೆರಹಿತ ಸೇವೆಯನ್ನು ಒದಗಿಸುತ್ತದೆ. ಎಲ್ಲ ಅರ್ಹ ಗ್ರಾಹಕರೂ ಬ್ಯಾಂಕಿನ ಯಾವುದೇ ಶಾಖೆಗೆ ಭೇಟಿ ನೀಡಿ ಎಸ್.ಸಿ.ಎಸ್.ಎಸ್.ಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಹ ಗ್ರಾಹಕರು 60 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರಬೇಕು ಮತ್ತು 55ರಲ್ಲಿ/ಅದಕ್ಕಿಂತ ಹೆಚ್ಚು ವಯಸ್ಸಿನಲ್ಲಿ ನಿವೃತ್ತರಾಗಿರಬೇಕು. ರಕ್ಷಣಾ ಸೇವೆಗಳ ನಿವೃತ್ತ ಸಿಬ್ಬಂದಿ ಕೂಡಾ 50 ವರ್ಷ ವಯಸ್ಸು ದಾಟಿದ ನಂತರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಎಸ್.ಸಿ.ಎಸ್.ಎಸ್.ಗೆ ಹೂಡಿಕೆ ಮಾಡುವುದು ಆದಾಯ ತೆರಿಗೆ ಕಾಯ್ದೆ, ಪರಿಚ್ಛೇದ 80ಸಿ ಅನ್ವಯ ಅನುಕೂಲಗಳಿಗೆ ಅರ್ಹತೆ ಹೊಂದಿರುತ್ತದೆ. ಈ ಯೋಜನೆಯು ಐದು ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು ತ್ರೈಮಾಸಿಕ ಬಡ್ಡಿ ಪಾವತಿ ನೀಡುತ್ತದೆ. ಇದನ್ನು ಹಲವು ಬಾರಿ ಮೂರು ವರ್ಷಗಳಿಗೆ ವಿಸ್ತರಿಸಬಹುದು. ಇದರೊಂದಿಗೆ ಎಸ್.ಸಿ.ಎಸ್.ಎಸ್. ಅಡಿಯಲ್ಲಿ ನೀಡಲಾಗವ ಬಡ್ಡಿದರವನ್ನು ಕಾಲಕಾಲಕ್ಕೆ ಸರ್ಕಾರ ಪ್ರಕಟಿಸುವಂತೆ ನೀಡಲಾಗುತ್ತದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಪೇಮೆಂಟ್ಸ್, ಲಯಬಿಲಿಟಿ ಪ್ರಾಡಕ್ಟ್ಸ್, ಕನ್ಸೂಮರ್ ಫೈನಾನ್ಸ್ ಅಂಡ್ ಮಾರ್ಕೆಟಿಂಗ್ ನ ಕಂಟ್ರಿ ಹೆಡ್, “ಮುಂಚೂಣಿಯ ಏಜೆನ್ಸಿ ಬ್ಯಾಂಕ್ ಗಳಲ್ಲಿ ಒಂದಾಗಿ ನಾವು ಭಾರತ ಸರ್ಕಾರದ ಅಡಿಯಲ್ಲಿ ಮುಂಚೂಣಿಯ ನ್ಯಾಷನಲ್ ಸ್ಮಾಲ್ ಸೇವಿಂಗ್ಸ್ ಸ್ಕೀಮ್‍ ಕಾರ್ಯಕ್ರಮವನ್ನು ಒದಗಿಸಲು ಬಹಳ ಸಂತೋಷ ಹೊಂದಿದ್ದೇವೆ. ಎಸ್.ಸಿ.ಎಸ್.ಎಸ್. ದೇಶದ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ನೀಡಲಾಗುವ ಆಕರ್ಷಕ ಬಡ್ಡಿದರದಲ್ಲಿ ಸ್ಥಿರವಾದ ಆದಾಯ ಪಡೆಯಲು ನೆರವಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಪರಿಚ್ಛೇದ 80ಸಿ ಅನ್ವಯ ಅರ್ಹತೆ ಪಡೆಯುವುದು ಈ ಯೋಜನೆಯ ಹೆಚ್ಚುವರಿ ಅನುಕೂಲವಾಗಿದೆ” ಎಂದರು.
ಎಸ್.ಸಿ.ಎಸ್.ಎಸ್. ಬ್ಯಾಂಕಿನ ಪ್ರಸ್ತುತದ ಸರ್ಕಾರದ ಬೆಂಬಲಿತ ಕೊಡುಗೆಗಳಾದ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆಗೆ ಪೂರಕವಾಗಿರುತ್ತದೆ.
2024ರ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಎಚ್.ಡಿ.ಎಫ್.ಸಿ. ಬ್ಯಾಂಕ್ ಸಂಗ್ರಹಿಸಿದ ತೆರಿಗೆಗಳ ಸಂಗ್ರಹವು 10 ಲಕ್ಷ ಕೋಟಿ ಮೀರಿದ್ದು ದೇಶದ ಮುಂಚೂಣಿಯ ಮೂರು ಏಜೆನ್ಸಿ ಬ್ಯಾಂಕುಗಳಲ್ಲಿ ಒಂದಾಗಿಸಿದ್ದು ಇದನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಮತ್ತು ಭಾರತ ಸರ್ಕಾರದ ಕಂ‍ಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ವರದಿಯಲ್ಲಿ ದೃಢೀಕರಿಸಿದೆ.

RELATED ARTICLES
- Advertisment -
Google search engine

Most Popular