ತೋಕೂರು : ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ದ.ಕ ಜಿಲ್ಲಾಡಳಿತ,ಗ್ರಾಮ ಪಂಚಾಯತ್ ಪಡುಪಣಂಬೂರು,ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ, ದ.ಕ ಜಿಲ್ಲೆ,ಇವರುಗಳ ಮಾರ್ಗದರ್ಶನದಲ್ಲಿ
ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ, ದಿನಾಂಕ 15/08/2023 ರಂದು ಗುರುವಾರ ಬೆಳಗ್ಗೆ ಘಂಟೆ 9:30 ರಿಂದ ಸಂಸ್ಥೆಯ ಸಭಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಜರುಗಿದ ಸಭಾ ಕಾರ್ಯಕ್ರಮದಲ್ಲಿ ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಸ್ಕೂಲ್ ಬ್ಯಾಗ್, ಐ.ಡಿ ಕಾರ್ಡ್(ಗುರುತಿನ ಚೀಟಿ),ಕಂಪಾಸ್ ಬಾಕ್ಸ್ ಮತ್ತು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಾಗೂ ಅಂಗನವಾಡಿಗೆ ಶಾಲಾ ಮಕ್ಕಳ ಉಪಯೋಗಕ್ಕಾಗಿ ಮಿಕ್ಸಿಯನ್ನು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಜಿತ್ ಕುಮಾರ್ ಮ್ಯಾನೇಜರ್, ಭಾರತ್ ಕೋ ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಶಾಖೆ,ಸುರತ್ಕಲ್,ಇವರು ವಹಿಸಿ ಸರಕಾರಿ ಶಾಲಾ ಮಕ್ಕಳು ಮೂಲ ಸೌಕರ್ಯದಿಂದ ವಂಚಿತರಾಗ ಬಾರದು ಎಂದು ಹೇಳಿದರು.ಹಾಗೂ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಅತಿಥಿಗಳಾಗಿ ಶ್ರೀಕಾಂತಿ ಶೆಟ್ಟಿ ಜೊತೆ ಕಾರ್ಯದರ್ಶಿ ಪಡುಪಣಂಬೂರು ಸಹಕಾರಿ ವ್ಯವಸಾಹಿಕ ಸಂಘ,ಹಳೆಯಂಗಡಿ ಇವರು ಉಪಸ್ಥಿತರಿದ್ದು,ನಮ್ಮ ಮಾತೃಭೂಮಿಯನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಗೊಳಿಸಲು ನಡೆದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಿದರು.
ನಿವೃತ್ತ ಯೋಧರಾದ ಹವಾಲ್ದಾರ್ ವಸಂತ ಗೋಪಾಲಕೃಷ್ಣ ಕಾಮತ್, ಸುರತ್ಕಲ್ ಉಪಸ್ಥಿತರಿದ್ದು,ಯುವ ಜನತೆಯು ಸೇನೆಯಲ್ಲಿ ಸೈನಿಕರಾಗಿ ತಮ್ಮನ್ನು ತೊಡಗಿಸಿ ಕೊಳ್ಳಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ ಆಸೀನರಾಗಿದ್ದರು. ▪ಈ ಸಂದರ್ಭದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಶ್ರೀಮತಿ ಶೋಭಾ.ವಿ.ಅಂಚನ್, ಪಡುಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹೇಮನಾಥ ಅಮೀನ್, ಸದಸ್ಯರಾದ ಶ್ರೀ ಮೋಹನ್ ದಾಸ್, ಶ್ರೀ ಸಂತೋಷ್ ಕುಮಾರ್, ಸ್ಫೋರ್ಟ್ಸ್ ಕ್ಲಬ್ ನ ಗೌರವ ಮಾರ್ಗದರ್ಶಕರು ಹಾಗೂ ನಿವೃತ್ತ ಯೋಧರಾದ ಲೀಲಾಧರ್ ಕಡಂಬೋಡಿ,ಸ.ಹಿ.ಪ್ರಾ. ಹಿಂದುಸ್ಥಾನಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ,ಸಹ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಕುಟಿನ್ಹೊ, ತೋಕೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಮೀನಾಕ್ಷಿ, ಸಹಾಯಕಿ ಶ್ರೀಮತಿ ಸುಜಾತಾ.ಎಸ್.ಕುಲಾಲ್, ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಶ್ರೀ ರತನ್ ಶೆಟ್ಟಿ,ಶ್ರೀ ಸುರೇಶ್ ಶೆಟ್ಟಿ, ಶ್ರೀ ಜಗದೀಶ್ ಕುಲಾಲ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು,ಸದಸ್ಯೆಯರು, ಗ್ರಾಮಸ್ಥರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮಹಾ ಪೋಷಕರಾಗಿ ವಿನಯ ಕುಮಾರ್,ಪ್ರಾಜೆಕ್ಟ್ ಮ್ಯಾನೇಜರ್ M.R.P.L, ಕಿಶೋರ್ ಬಂಗೇರ ಮುಕ್ಕ, ರೇಷ್ಮಾ ಸತೀಶ್,ಮೇರಿಹಿಲ್ ಮಂಗಳೂರು, ಲಲಿತಾ.ಬಿ.ಮತ್ತು ಮಕ್ಕಳು ಸುರತ್ಕಲ್ಸುರೇಖಾ ಕಲ್ಲಾಪು, ಭವ್ಯಶ್ರೀ ಎನ್.ಐ.ಟಿ.ಕೆ,ಸುರತ್ಕಲ್,ಶ್ರೀಮತಿ ಸುಜಾತ ಸುವರ್ಣ ಮಂಗಳೂರು,ದಿ|ಭೋಜ ಅಮೀನ್ ಅವರ ಪತ್ನಿ ಮತ್ತು ಮಕ್ಕಳು,ದಿ|ಜಾನಕಿ ಕೋಟ್ಯಾನ್ ಅವರ ಮಕ್ಕಳು,ದಿ| ಕೃಷ್ಣ ಆಚಾರ್ಯ ಅವರ ಮಕ್ಕಳು ಯಶೋಧ.ಆರ್.ಸುವರ್ಣ “ಶ್ರೀ ಸನ್ನಿಧಿ”ಮತ್ತು ಮಕ್ಕಳು,ಶ್ರೀ ವಿಶ್ವನಾಥ ಆಚಾರ್ಯ ಮತ್ತು ಶ್ರೀಮತಿ ಪುಷ್ಪ.ವಿ.ಆಚಾರ್ಯ ಮತ್ತು ಮಕ್ಕಳು, ಪ್ರವೀಣ್ ಅಮೀನ್, ಜಾನಕಿ ಅಮೀನ್ ಮತ್ತು ಮಕ್ಕಳು ತೋಕೂರು ಇವರುಗಳು ಸಹಕರಿಸಿದರು.
ಮಹಿಳಾ ಸದಸ್ಯೆಯರಾದ ಚಂದ್ರಿಕಾ ಸಂತೋಷ್,ಶ್ರೀಮತಿ ಮೀನಾಕ್ಷಿ ಸುನಿಲ್ ಶ್ರೀಮತಿ ಸರಿತಾ ರಮೇಶ್, ಕುಮಾರಿ ನಿಶ್ಮಿತಾ,ಕುಮಾರಿ ಕಾವ್ಯ,ಕುಮಾರಿ ಶಿವಾನಿ ನಾಡಗೀತೆ ಹಾಡಿದರು.
ಅಧ್ಯಕ್ಷರು ಶ್ರೀ ದೀಪಕ್ ಸುವರ್ಣ ಸ್ವಾಗತಿಸಿದರು,▪ಕೋಶಾಧಿಕಾರಿ ಶ್ರೀ ಸುನಿಲ್ ದೇವಾಡಿಗ ಇವರು ಶಾಲಾ ಪರಿಕರಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
ಸದಸ್ಯೆ ಕುಮಾರಿ ಕಾವ್ಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಆಟೋಟ ಸ್ಪರ್ಧೆಗಳ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಶೆಟ್ಟಿ ಸಹಕರಿಸಿದರು. ಉಪಾಧ್ಯಕ್ಷ ಶ್ರೀ ಸಂತೋಷ್ ಕುಮಾರ್ ವಂದಿಸಿದರು. ಕಾರ್ಯಾಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.