Monday, December 2, 2024
Homeಬಂಟ್ವಾಳಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ಇಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ಇಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದ ನೂತನ ಶಾಲಾ ಕೊಠಡಿಗೆ ಶಿಲನ್ಯಾಸ

ಬಂಟ್ವಾಳ : ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ಇಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದಿಂದ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕೊಠಡಿಗೆ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಶಿಲಾನ್ಯಾಸ ನೆರವೇರಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಳನೀರು ಅನಂತ ತಂತ್ರಿಗಳ ಪೌರೋಹಿತ್ಯದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ ಹೆಚ್ ಇವರನ್ನು ಶಾಲಾ ಶಿಕ್ಷಕರಿಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸದಸ್ಯರು ಸೇರಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,, ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು, ದಿನೇಶ್ ಅಮ್ಮ್ಟೂರ್, ಜಯರಾಮ್ ಹೊಳ್ಳ, ಶ್ರೀಧರ್ ಶೆಟ್ಟಿ ಬೊಂಡಾಲ,ಕೊರಗಪ್ಪ ಬಂಗೇರ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಶೆಟ್ಟಿ,ಶಿವರಂಜಿನಿ ಕಲಾಕೇಂದ್ರ ಬೊಕ್ಕಸದ ಸಂಚಾಲಕಿ ಶಾರದಾಎಸ್ ರಾವ್, ಸಂಸ್ಕೃತ ಗುರುಗಳಾದ ದೇವರಾಜ್, ಮಂಗಳೂರು,ಶಿವಾನಂದ, ಬೊಂಡಾಲ, ಜನ ಸೇವಾ ಸಮಿತಿ ಬೊಂಡಾಲ ಇದರ ಸಂಚಾಲಕರು ಗಿರಿಧರ್ ಬಿ. ಪಿ.
ಉಪಸ್ಥಿತರಿದ್ದರು

ಶಿಶುಮಂದಿರದ ಮಕ್ಕಳು ಪ್ರಾರ್ಥಿಸಿ,ಶಾಲಾ ಶಿಕ್ಷಕಿ ಲಾವಣ್ಯ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ ಹೆಚ್ ವಂದಿಸಿ, ಶಿಕ್ಷಕಿ ಸೌಮ್ಯಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಭವ್ಯ ಹಾಗೂ ಕಿಶೋರಿ ಇವರು ಸಹಕರಿಸಿದ

RELATED ARTICLES
- Advertisment -
Google search engine

Most Popular