ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕಲ್ ಇದರ ಶಾಲಾ ವಾರ್ಷಿಕೋತ್ಸವ ಸಂಭ್ರಮ ಪ್ರತಿಭಾ ಸಿಂಚನ-2025 ಕಾರ್ಯಕ್ರಮ ಸಂಭ್ರಮದಲ್ಲಿ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಪ್ರತಿಯೊಂದು ಶಾಲೆಯು ಉನ್ನತ ಮಟ್ಟ ಬೆಳೆಯ ಬೇಕಾದರೆ ಆ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಹಾಗೆ ನಿಮ್ಮೂರಿನಲ್ಲಿ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ,ಬೈಂದೂರು ವಲಯದಲ್ಲಿ ಒಂದು ಯಶಸ್ವಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ ಎಂದರು
ಬೆಳಗಿನ ಶಾಲಾ ಧ್ವಜಾರೋಹಣ ಪಂಚಾಯತ್ ಅಧ್ಯಕ್ಷರಾದ ಮೋಹನಚಂದ್ರ ನಿರ್ವಹಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷಸೂರ್ಯಕಾಂತ ಸಭಾ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಧನಸಹಾಯ ನೀಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿ ಮತ್ತು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ವಿಜೇತರಿಗೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಅಂಗನವಾಡಿ ಎಲ್ ಕೆ ಜಿ ಯುಕೆಜಿ ಪುಟಾಣಿಗಳಿಂದ ಮತ್ತು ಶಾಲಾ ವಿದ್ಯಾರ್ಥಿ ಸಾಂಸ್ಕೃತಿಕ ವೈಭವ ಮತ್ತು ಶ್ರೀರಾಮ ದರ್ಶನ ಯಕ್ಷಗಾನ ಹಾಗೂ ಕಲಾಶಕ್ತಿ ಕಲಾತಂಡ ಕನ್ನುಕೆರೆ ತೆಕ್ಕಟೆ ಇವರಿಂದ ನಗೆ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಮದನ್ ಕುಮಾರ್ ಮಾಜಿ ಜಿಲ್ಲಾ ಸದಸ್ಯರು, ಬಿ ಎಸ್ ಸುರೇಶ್ ಶೆಟ್ಟಿ ಉಪ್ಪುಂದ, ಗ್ರಾಮ ಪಂಚಾಯತ್ ಸದಸ್ಯರಾದ ಮುರಳೀಧರ, ವಿನೋದ್ ರಾಜ್, ದುರ್ಗಮ್ಮ, ಗಿರಿಜಾ,ಸುಪ್ರೀತಾ, ಬಬ್ರಿ ರಾಮ ಖಾರ್ವಿ, ನಾಗೇಶ್ ಖಾರ್ವಿ, ವೆಂಕಟರಮಣ ಖಾರ್ವಿ ಸುರೇಶ್ ಖಾರ್ವಿ,BHP ನಾಗರಾಜ್,ಸಂತೋಷ ಖಾರ್ವಿ,ಮನೋಹರ ಖಾರ್ವಿ, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಅಧ್ಯಾಪಕರು ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸರ್ವ ಸದಸ್ಯರು, ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ವಿದ್ಯಾರ್ಥಿ ನಾಯಕ, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಭಾಗೀರಥಿ ಸ್ವಾಗತಿಸಿದರು ಶಿಕ್ಷಕಿ, ಗೀತಾ ಹೆಗ್ಡೆ ನಿರೂಪಿಸಿದರು. ಶಿಕ್ಷಕಿ ಸತ್ಯಭಾಮ ವಂದಿಸಿದರು.