ಮುನಿಯಾಲು ಲಯನ್ಸ್ ಕ್ಲಬ್ ಜನಮೆಚ್ಚುಗೆ ಪಡೆದಿದೆ : ಮಹಮ್ಮದ್ ಹನೀಫ್
ಮುನಿಯಾಲು : ಮುನಿಯಾಲು ಲಯನ್ಸ್ ಕ್ಲಬ್ ಸರ್ವ ವಿಧದ ಸಾಧನೆ, ಸೇವೆ ಮಾಡಿ ಜನಮೆಚ್ಚುಗೆ ಪಡೆದು ಎಲ್ಲರಿಗೂ ಮಾದರಿಯಾಗಿದೆ. ಪ್ರೀತಿ ಮತ್ತು ಬಾಂಧವ್ಯದಿಂದ ಮಾತ್ರ ಲಯನ್ಸ್ ಸ್ವಯಂಸೇವಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸಲು ಸಾಧ್ಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹೇಳಿದರು.
ಅವರು ಮುನಿಯಾಲು ಲಯನ್ಸ್ ಕ್ಲಬ್ ಗೆ ಬುಧವಾರ ಅಧೀಕೃತ ಬೇಟಿ ನೀಡಿದ ಬಳಿಕ ಅಜೆಕಾರಿನ ಮಿಲನ್ ಮಲ್ಟಿಪರ್ಪಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ, ಮನೆ ನಿರ್ಮಾಣ ಮತ್ತು ಆರೋಗ್ಯ ನೆರವು ನೀಡಲಾಯಿತು. ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ, ಗೋಪಿನಾಥ ಭಟ್, ಅಶೋಕ್ ಎಂ ಶೆಟ್ಟಿ, ಹರ್ಷ ಶೆಟ್ಟಿ, ಶಂಕರ ಶೆಟ್ಟಿ ಅವರನ್ನು ಲಯನ್ಸ್ ಗವರ್ನರ್ ಗೌರವಿಸಿದರು. ಮುನಿಯಾಲು ಲಯನ್ಸ್ ಕ್ಲಬ್ ನ ಹಲವು ಸದಸ್ಯರಿಗೆ ಲಯನ್ಸ್ ಅಂತರಾಷ್ಟ್ರೀಯ ಪ್ರಮಾಣಪತ್ರ ಮತ್ತು ಪಿನ್ ನೀಡಿ ಗೌರವಿಸಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಅವರನ್ನು ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಗಿರೀಶ್ ರಾವ್, ಕೋಶಾಧಿಕಾರಿ ಶ್ರೀನಿವಾಸ ಪೈ, ಲಯನ್ಸ್ ಲಿಯೋ ಅಧ್ಯಕ್ಷ ಹೇಮಂತ್ ಭಟ್, ಮುನಿಯಾಲು ಲಯನ್ಸ್ ಕ್ಲಬ್ ಕೋಶಾಧಿಕಾರಿ ಅಶೋಕ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ನ ಸಂಪತ್ ಪೂಜಾರಿ ಲಯನ್ಸ್ ನೀತಿಸಂಹಿತೆ ಓದಿದರು. ಖಜಾನೆ ಸಂದೇಶ ಶೆಟ್ಟಿ ಧ್ವಜವಂದನೆ ಸಲ್ಲಿಸಿದರು. ಮುನಿಯಾಲು ಗೋಪಿನಾಥ ಭಟ್ ವಾರ್ಷಿಕ ವರದಿ ಮಂಡಿಸಿದರು. ಶಂಕರ ಶೆಟ್ಟಿ ನಿರೂಪಿಸಿದರು.