ಬೈಂದೂರು: ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.
ಬೆಳಗಿನ ಸಭಾ ಕಾರ್ಯಕ್ರಮದಲ್ಲಿ ಸತ್ವಸ್ವರೂಪಾನಂದ ಸ್ವಾಮೀಜಿ ಶ್ರೀರಾಮಕೃಷ್ಣಾಶ್ರಮ ಯಳಜಿತ್ ಆಶೀರ್ವಚನ ನೀಡಿದರು. ಶ್ರೀಮತಿ ಪದ್ಮಾವತಿ ಸಂಸ್ಥೆಯ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜೇಂದ್ರ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಯಳಜಿತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಶ್ರೀ ರಾಮಕೃಷ್ಣ ಕುಟೀರದ ವಿದ್ಯಾರ್ಥಿಗಳಿಂದ ಭಕ್ತಿ ಭಾವನ ಸಂಗಮ ಮಧ್ಯಾಹ್ನ 2 ಗಂಟೆಗೆ ಚರ್ಮೇಶ್ವರ ಸ್ಪರ್ಧೆ ಅದ್ದೂರಿಯಿಂದ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧನ ಮಾಡಿದ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿದ ಗೌರವಿಸಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಕೂಡ ಸಂಭ್ರಮದಲ್ಲಿ ನಡೆಯಿತು ಸುವರ್ಣ ಸಮಿತಿ ಅಧ್ಯಕ್ಷ ಮಂಗೇಶ್ ಶ್ಯಾನುಭೊಗ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಮತ್ತು ಹಿರಿಯ ವಿದ್ಯಾರ್ಥಿಗಳು ಮತ್ತು ಊರಿನವರಿಂದ ಯಕ್ಷ ಸಿರಿ ಮಿಂಚು ಕಾರ್ಯಕ್ರಮ ನಡೆಯಿತು.

ಸುವರ್ಣ ಸಮಿತಿ ಅಧ್ಯಕ್ಷರಾದ ಮಂಗೇಶ್ ಶ್ಯಾನುಭೊಗ್ ಅವರನ್ನು ಸಂಘ-ಸಂಸ್ಥೆ ಸಾರ್ವಜನಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ರಮಣಶ್ರೀ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷರಾದ ನಾಡೋಜ ಎಸ್ ಷಡಕ್ಷರ, ಬೈಂದೂರು ಕ್ಷೇತ್ರ ಶಾಸಕರಾದ ಗುರುರಾಜ್ ಗಂಟಿಹೊಳೆ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಬು ಹೆಗ್ಡೆ, ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷರು ರೈತರ ಸಂಘ ಬೈಂದೂರು, ಗೋವಿಂದ ಬಾಬು ಪೂಜಾರಿ ಅಧ್ಯಕ್ಷರು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ, ಶಂಕರ್ ಪೂಜಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬೈಂದೂರು ಡಾಕ್ಟರ್ ನಾರಾಯಣ ಬಿಲ್ಲವ ಹೊನ್ನುಮನೆ, ರಮೇಶ್ ಪೂಜಾರಿ ಅಧ್ಯಕ್ಷರು ಕಟ್ಟಡ ನಿರ್ಮಾಣ ಸಮಿತಿ, ಮಂಜಯ್ಯ ಪೂಜಾರಿ, ಕೆ.ಎಂ ಕೊಠಾರಿ, ಎಸ್ ಬಿ ಎಂ ಸಿ ಅಧ್ಯಕ್ಷರಾದ ರವಿಚಂದ್ರ ಶೆಟ್ಟಿ, ವಿಜೇಂದ್ರ ಶೆಟ್ಟಿ, ಶಾಲಾ ಶಿಕ್ಷಕರು ,ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಗೋಳಿಹೊಳೆ, ವಿದ್ಯಾರ್ಥಿ ಪೋಷಕರು, ಅಂಗನವಾಡಿ ಸಿಬ್ಬಂದಿಗಳು, ಊರಿನ ಎಲ್ಲಾ ಸಂಘ-ಸಂಸ್ಥೆಗಳು, ಹಾಗೂ ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು
ಶಿಕ್ಷಕರಾದ ಸುಬ್ರಹ್ಮಣ್ಯ ಜಿ ಉಪ್ಪುಂದ ,ಚಂದ್ರ ಕೊಠಾರಿ ಕಾರ್ಯಕ್ರಮವನ್ನು ನಿರೂಪಿಸಿದರು
ಡಾಕ್ಟರ್ ಮಹಾದೇವ ಸ್ವಾಗತಿಸಿದರು ,ಶ್ರೀಮತಿ ಪೂರ್ಣಿಮಾ ವಂದಿಸಿದರು