spot_img
30.6 C
Udupi
Monday, September 25, 2023
spot_img
spot_img
spot_img

ಗ್ರಾಮ ಸಾಹಿತ್ಯ ಸಂಭ್ರಮ ಆರಂಭ : “ಸಾಹಿತ್ಯಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ” :ಕುಂಬ್ರ ದುರ್ಗಾಪ್ರಸಾದ್ ರೈ

ಕುಂಬ್ರ:ನವೆಂಬರ್ 13, ಸಾ.ಪ. ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ್ ರೈ ಅವರ ಪೋಷಕತ್ವದಲ್ಲಿ
ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಯುವ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಇದರ ಪ್ರಥಮ ಕಾರ್ಯಕ್ರಮ ಒಳಮೊಗ್ರು ಗ್ರಾಮದ ಕುಂಬ್ರದ
ನವೋದಯ ರೈತ ಸಭಾ ಭವನದಲ್ಲಿ ನಡೆಯಿತು.

ಯಾವುದೇ ಜಾತಿ, ಧರ್ಮ,ಮತ, ರಾಜಕೀಯ ಭೇದವಿಲ್ಲದ ಕ್ಷೇತ್ರವೆಂದರೆ ಸಾಹಿತ್ಯ. ಸಾಹಿತ್ಯಕ್ಕೆ ಎಲ್ಲರನ್ನ ಒಗ್ಗೂಡಿಸುವ ವಿಶೇಷ ಶಕ್ತಿ ಇದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಾಡಗೀತೆ ಕಂಠಪಾಠ ವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾಡಗೀತೆಯ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು
ಕಾರ್ಯಕ್ರಮದ ಉದ್ಘಾಟಕರಾದ ಕುಂಬ್ರ ದುರ್ಗಾ ಪ್ರಸಾದ್ ರೈಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ರಸ್ತೆಯಿಂದ ರೈತ ಭವನದವರೆಗೆ ಹಳದಿ ಮತ್ತು ಕೆಂಪು ವರ್ಣದ ಕನ್ನಡದ ತೋರಣಗಳಿಂದ ಹಾಗೂ ಕನ್ನಡ ಧ್ವಜಗಳಿಂದ ಅಲಂಕೃತಗೊಂದಿತ್ತು ಹಾಗೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಜೀವನ ಕಲ್ಲೇಗ ಅವರಿಂದ ನಿರ್ಮಿತ ತೆಂಗಿನ ಗರಿ ಗಳ ಸಾಂಪ್ರದಾಯಿಕವಾಗಿ ಅಲಂಕೃತಗೊಂಡ ಸ್ವಾಗತ ಕಮಾನು ಹಾಗೂ ವೇದಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಮೆರುಗನ್ನು ನೀಡುತ್ತಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ. ಸಾ. ಪ. ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು ಮಾತನಾಡಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಸರಣಿ ಕಾರ್ಯಕ್ರಮ ತಾಲೂಕಿನ 32 ಗ್ರಾಮಗಳಲ್ಲಿಯೂ ನಡೆಯಲಿದೆ. ಇದರಲ್ಲಿ ಸಾಹಿತ್ಯಾಸಕ್ತ ವಿವಿಧ ಸಂಘ ಸಂಸ್ಥೆಗಳನ್ನು ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಸಾಹಿತ್ಯ ಪರಿಷತ್ ಜೊತೆ ಸೇರಿಸಿ ನಡೆಸುವ ಸರಣಿ ಕಾರ್ಯಕ್ರಮವಿದು. ಗ್ರಾಮದ ಸಾಹಿತಿಗಳನ್ನ ಗುರುತಿಸಿ ಗೌರವಿಸುವ ಹಾಗೂ ಯುವ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿ ಪ್ರೋತ್ಸಾಹಿಸುವ ಸಾಹಿತ್ಯ ಸಂಭ್ರಮವೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿ ಪಲ್ಲತ್ತಾರು, ಪ್ರಕಾಶ್ಚಂದ್ರ ರೈ ಕೈಕಾರ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ರಾಜೇಶ್ ಪರ್ಪುಂಜ, ವಿಶ್ವ ಯುವಕ ಮಂಡಲ ಕುಂಬ್ರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಡೆಕ್ಕೋಡಿ, ಸ. ಪ. ಪೂ. ಕಾಲೇಜು ಕುಂಬ್ರ ಇಲ್ಲಿನ ಪ್ರಾಂಶುಪಾಲರಾದ ಶ್ರೀ ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಹೆಚ್. ಜಿ. ಶ್ರೀಧರ್ ಸಂದರ್ಭೋಚಿತವಾಗಿ ಮಾತನಾಡಿದರು.

ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಹಾಗೂ ಯುವ ಮತ್ತು ಹಿರಿಯರ ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀ ರಘು ಇಡ್ಕಿದು ವಹಿಸಿದ್ದರು. ಒಳಮೊಗ್ರು ಗ್ರಾಮದ ವಿವಿಧ ಶಾಲೆಗಳಿಂದ ಸುಮಾರು 29 ಮಕ್ಕಳು ಕಥೆ ಮತ್ತು ಕವನ ವಾಚಿಸಿದರು. ಒಟ್ಟು 80 ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹತ್ತು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಉಚಿತ ಕಣ್ಣಿನ ತಪಾಸಣಾ ಶಿಬಿರ ಪುತ್ತೂರಿನ ಪ್ರತಿಷ್ಠಿತ ಸಂಸ್ಥೆ ಕಾಮತ್ ಒಪ್ಟಿಕಲ್ಸ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಿದರು. ಕುಂಬ್ರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗೋಪಾಲಕೃಷ್ಣ ಉಪಾಧ್ಯಾಯ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಹಲವಾರು ಸಾರ್ವಜನಿಕರು ಇದರ ಸದುಪಯೋಗ ಪಡುಕೊಂಡರು.

ಅಭಿನಂದನಾ ಕಾರ್ಯಕ್ರಮ: ಹಿರಿಯ ಸಾಹಿತಿಗಳು ಮತ್ತು ನ್ಯಾಯವಾದಿಗಳು ಆದ ಕುಂಬ್ರ ದುರ್ಗಾಪ್ರಸಾದ್ ರೈ, ಚಲನಚಿತ್ರ ನಟ, ರಂಗ ಕಲಾವಿದರು ಶ್ರೀ ಸುಂದರ ರೈ ಮಂದಾರ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷರು ಶ್ರೀ ಚಂದ್ರಮೌಳಿ ಕಡಂದೇಲುರವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಸುಜಯ ಎಸ್ ಪ್ರಾರ್ಥಿಸಿ, ಬಮಿತ ಎಂ. ಹೆಚ್. ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ಚೈತ್ರಾ ಮಾಯಿಲಕೊಚ್ಚಿ, ಸುಪ್ರೀತಾ ಚರಣ್ ಪಾಲಪ್ಪೆ ಮತ್ತು ಕು. ಅಖಿಲಾ ಶೆಟ್ಟಿ ನಿರೂಪಣೆಗೈದರು. ಹಿತೇಶ್ ಕುಮಾರ್. ಎ. ವಂದಿಸಿದರು.
ಕವಿಗೋಷ್ಠಿ ಅಧ್ಯಕ್ಷರ ಪರಿಚಯ ಕು. ಅಪೂರ್ವ ಕಾರಂತ್ ಮತ್ತು ಮಂಜುಶ್ರೀ ನಲ್ಕ ವಾಚಿಸಿದರು. ಸನ್ಮಾನ ಪತ್ರ ಅನ್ನಪೂರ್ಣ. ಎನ್. ಕೆ. ವಾಚಿಸಿದರು. ದಿನಪೂರ್ತಿ ನಡೆದ ಈ ಕಾರ್ಯಕ್ರಮವು ನಾಡಗೀತೆಯೊಂದಿಗೆ ಕನ್ನಡಾಂಬೆಗೆ ಪುಷ್ಪಾರ್ಚನೆಗೈಯುವ ಮೂಲಕ ಪ್ರಾರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

Related Articles

Stay Connected

0FansLike
3,870FollowersFollow
0SubscribersSubscribe
- Advertisement -

Latest Articles