Monday, January 13, 2025
Homeಮಂಗಳೂರುಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2024 ಸರಣಿ ಕಾರ್ಯಕ್ರಮ

ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2024 ಸರಣಿ ಕಾರ್ಯಕ್ರಮ

ಅರಿಯಡ್ಕ…ದ.ಕ.ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು, ತಾಲೂಕು ಘಟಕದ ನೇತೃತ್ವದಲ್ಲಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು , ಗ್ರಾಮ ಪಂಚಾಯತ್ ಅರಿಯಡ್ಕ ಹಾಗೂ ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ, ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಇದರ ಆಶ್ರಯದಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2024 ಸರಣಿ ಕಾರ್ಯಕ್ರಮ 18 ನ30 ರಂದು ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ವೈಭವದ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಮೂಲಕ ತಾಯಿ ಭುವನೇಶ್ವರಿಗೆ ಜಯ ಘೋಷ ಮೊಳಗಿಸಿ, ಗ್ರಾಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ರಕ್ಷಾ ರವರಿಗೆ ಪೇಟ ತೊಡಿಸಿ,ಶಾಲಾ ವಠಾರದಲ್ಲಿ ಮೆರವಣಿಗೆ ನಡೆಸಿ ಸಭಾಂಗಣಕ್ಕೆ‌ ಕರೆತರಲಾಯಿತು. ಕಾರ್ಯಕ್ರಮವನ್ನು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ದಿಂದ ಉತ್ತಮ ಕಾರ್ಯಕ್ರಮದ ಜೋಡಣೆಯಾಗಿದೆ.ಪುಟ್ಟ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ದೊಡ್ಡ ಕಾರ್ಯಕ್ರಮ‌ ಇದಾಗಿದೆ ಎಂದು ಶುಭ ಹಾರೈಸಿದರು.ಶ್ರೀರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಸಾಹಿತ್ಯ ಸಂಭ್ರಮ ಗ್ರಾಮ ಮಟ್ಟಕ್ಕೆ ವಿಸ್ತರಿಸಿದ್ದು ಸಂತಸ ತಂದಿದೆ.ಮಕ್ಕಳ ಬೆಳವಣಿಗೆಗೆ‌ ಅವಶ್ಯ ಇರುವುದಕ್ಕೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯ.ಇಂತಹ‌ ಕಾರ್ಯ ಕ್ರಮಗಳನ್ನು‌ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು, ಉತ್ತಮ ಸಾಹಿತಿಗಳಾಗಿ ಆದರ್ಶ ವ್ಯಕ್ತಿಗಳಾಗಿ, ಸಮಾಜಕ್ಕೆ ಮತ್ತು ಗುರು ಹಿರಿಯರಿಗೆ ಗೌರವವನ್ನು ತರುವಲ್ಲಿ ಯಶಸ್ವಿಯಾಗಿದೆಂದು ಶುಭ ಹಾರೈಸಿದರು.ವೇದಿಕೆಯಲ್ಲಿ‌ ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಇದರ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಉಪಸ್ಥಿತರಿದ್ದು‌ ಸಂದರ್ಭೋಚಿತ ವಾಗಿ ಮಾತಾಡಿ ಶುಭ ಹಾರೈಸಿದರು.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
9 ಜನ ಸಾಧಕರಿಗೆ ಸನ್ಮಾನ. ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ,ಡಿ. ಅಮ್ಮಣ್ಣ ರೈ ಪಾಪೆ ಮಜಲು -ನಿವೃತ್ತ ಯೋಧ,ತೆರೆಜ್ ಎಂ ಸಿಕ್ವೇರಾ -ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕಿ, ಗುಂಡ್ಯಡ್ಕ ವಾಸು ಪೂಜಾರಿ -ಕೃಷಿ, ತಿಲಕ್ ರೈ ಕುತ್ಯಾಡಿ -ಪತ್ರಿಕೋದ್ಯಮ, ನಾರಾಯಣ ಸುವರ್ಣ – ಯಕ್ಷಗಾನ, ಗೀತಾ ಬಳ್ಳಿ ಕಾನ-ನಾಟಿ ವೈದ್ಯರು, ಕಾವು ದಿವ್ಯ ನಾಥ ಶೆಟ್ಟಿ -ಹೈನುಗಾರಿಕೆ, ಅಮ್ಮು ಪೂಂಜ- ಸಂಘಟನೆ, ಚಂದು ಮೂಲ್ಯ -ಗುಡಿ ಕೈಗಾರಿಕೆ, ಮತ್ತು ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯಪ್ರಕಾಶ್ ರವರನ್ನು ಕಾವು ಸಿ.ಎ ಬ್ಯಾಂಕ್ ನನ್ಯ ಅಚ್ಚುತ್ತ ಮೂಡಿತ್ತಾಯ ರವರು ಸನ್ಮಾನಿಸಿ ಅಭಿನಂದಿಸಿದರು.ಉಮೇಶ್ ನಾಯಕ್ ರವರು ಕನ್ನಡದ ಕಂಪನ್ನು ಹಳ್ಳಿ ಹಳ್ಳಿಗೆ ತಲುಪಿಸುವಲ್ಲಿ ಯಶಸ್ಸನ್ನು ಕಂಡವರು.ಸಾಹಿತ್ಯ ಬೆಳೆಯಬೇಕಾದರೆ, ಅದರಲ್ಲಿ ಆಸಕ್ತಿ ಬೇಕು.ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಸಫಲವಾಗಿದೆ.ಇಂದು ಸಾಧಕರನ್ನು ಗುರುತಿಸಿರವುದು, ಇತರರಿಗೆ ಪ್ರೇರಣೆಯಾಗಲಿ ಎಂದು ನನ್ಯ ಅಚ್ಚುತ್ತ ಮೂಡಿತ್ತಾಯ ಹೇಳಿದರು.ಸನ್ಮಾನ ಸ್ವೀಕರಿಸಿದವರ ಪರವಾಗಿ, ತಿಲಕ್ ರೈ ಕುತ್ಯಾಡಿ ಮಾತಾಡಿ, ಕನ್ನಡದ ಕಂಪು ಹಳ್ಳಿಯಿಂದ ಪ್ರಾರಂಭಗೊಂಡು, ರಾಷ್ಟ್ರ ಮಟ್ಟದ ತನಕ ಪಸರಿಸಲಿ ಇದೊಂದು ಮಾದರಿ ಕಾರ್ಯಕ್ರಮ ಎಂದರು
ಸರಕಾರಿ ಪ್ರೌಢ ಶಾಲೆ ಪಾಪೆ ಮಜಲು ಇದರ ಮುಖ್ಯೋಪಾಧ್ಯಾಯ ಮೋನಪ್ಪ ಬಿ ಪೂಜಾರಿ ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರಿನ ಜಗದೀಶ್ ಬಾರಿಕೆ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಆಶಾ ಮಯ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ನಂತರ ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಅಭಿಯಾನ ಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಪ್ರಣವ್ ಭಟ್ ರವರಿಂದ ನಡೆಯಿತು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮೇಬಲ್ ಡಿಸೋಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಲೋಕ ಮಾತೆ ಅಹಲ್ಯಾ ಬಾಯಿ ಹೊಳ್ಕರ್ ಇವರ 300 ನೇ ಜಯಂತಿ ಪ್ರಯುಕ್ತ ಉಪನ್ಯಾಸವನ್ನು ವಿವೇಕಾನಂದ ಬಿ ಎಡ್ ಕಾಲೇಜು ಪ್ರಾಂಶುಪಾಲೆ ಶೋಭಿತಾ ಸತೀಶ್ ನೀಡಿದರು.ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಪೂರ್ಣಿಮಾ ಪೆರ್ಲಂಪಾಡಿ ನಿರೂಪಿಸಿದರು..ಬಾಲ ಕವಿ ಗೋಷ್ಠಿ ಅಧ್ಯಕ್ಷತೆ ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಇದರ ಶಿಕ್ಷಕಿ ಸವಿತಾ ವಹಿಸಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಆಶಾ ಮಯ್ಯ ನಿರೂಪಿಸಿದರು.ಬಾಲ ಕಥಾ ಗೋಷ್ಠಿಯ ಅಧ್ಯಕ್ಷತೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ ವಹಿಸಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಹರ್ಷಿತಾ ಕುಲಾಲ್ ಕಾವು ನಿರೂಪಿಸಿದರು.ಪ್ರವಾಸ ಕಥನ ಲೇಖನ ವಾಚನ ಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಕಿ ರೇವತಿ ವಹಿಸಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಶ್ರೀಶಾವಾಸವಿ ತುಳುನಾಡ್ ನಿರೂಪಿಸಿದರು.ನನ್ನ ಆಪ್ತ ಮಿತ್ರ ಲೇಖನ ವಾಚನ ಗೋಷ್ಠಿಯ ಅಧ್ಯಕ್ಷತೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವು ಇದರ ಶಿಕ್ಷಕಿ ಪ್ರತಿಮಾ ಎಸ್ ವಹಿಸಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸದಸ್ಯೆ ಶ್ರೇಯಾ ಶೆಟ್ಟಿ ನಿರೂಪಿಸಿದರು.ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ಲೇಖನ ವಾಚನ ಗೋಷ್ಠಿಯ ಅಧ್ಯಕ್ಷತೆಯನ್ನು ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇದರ ಮುಖ್ಯೋಪಾಧ್ಯಾಯಿನಿ ದೀಪಿಕಾ ಚಾಕೋಟೆ ವಹಿಸಿ, ಗ್ರಾಮ ಸಾಹಿತ್ಯ ಪರಿಷತ್ ಸಂಚಾಲಕ ನಾರಾಯಣ ಕುಂಬ್ರ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ…
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನನ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು, ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು, ಸರ್ಕಾರಿ ಹಿರಿಯ ಪ್ರಾಥಮಿಕ ಅರಿಯಡ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವು,ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಶಾಲಾ ವಿದ್ಯಾರ್ಥಿಗಳಿಂದು‌ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ, ತಮ್ಮ ಸಾಮರ್ಥ್ಯವನ್ನು ಪರಿಚಯಿಸಿದರು.
ಸಮಾರೋಪ ಸಮಾರಂಭ…….
ಸಮಾರೋಪ ಸಮಾರಂಭದಲ್ಲಿ ಬುಶ್ರ ಆಂಗ್ಲ ಮಾಧ್ಯಮ ಶಾಲೆ ಕಾವು ಇದರ ವಿದ್ಯಾರ್ಥಿನಿ ಆಯಿಷತ್ ಮುಶೈನಾ ಸಮಾರೋಪ ಭಾಷಣ ಮಾಡಿ, ಸಾಹಿತ್ಯ ಪರಿಷತ್ ಗ್ರಾಮ ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸಿದೆ, ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಮಕ್ಕಳನ್ನು ಒಂದೆಡೆ ಸೇರಿಸಿ ವೇದಿಕೆ ಒದಗಿಸಿ ಕೊಡುವ ಮೂಲಕ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅರಿಯಡ್ಕ ಇದರ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಉಪಸ್ಥಿತರಿದ್ದರು.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸಭಾಧ್ಯಕ್ಷತೆ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸರಕಾರಿ ಪ್ರೌಢಶಾಲೆ ಪಾಪೆಮಜಲು ಮತ್ತು ಇಲ್ಲಿನ ಎಸ್. ಡಿ. ಎಂ. ಸಿ ಯವರು ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದರು.ಗ್ರಾಮ ಸಾಹಿತ್ಯ ಪರಿಷತ್ ಸಂಚಾಲಕ ನಾರಾಯಣ ಕುಂಬ್ರ ಸ್ವಾಗತಿಸಿ, ವಂದಿಸಿದರು.ಚಿಗುರೆಲೆ ಸಾಹಿತ್ಯ ಪರಿಷತ್ ಬಳಗ ಪುತ್ತೂರು ಇದರ ಸದಸ್ಯ ಗಿರೀಶ್ ಕೊಯಿಲ ನಿರೂಪಿಸಿದರು

RELATED ARTICLES
- Advertisment -
Google search engine

Most Popular