ರಾಜ್ಯ ಮಟ್ಟದ ಇಂಟರ್ ಡೂಜೋ ಕರಾಟೆ ಚ್ಯಾಂಪಿಯನ್ 2024 ಇದರ ಮಾರ್ಗದರ್ಶನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಫ್ ಅಲೈಡ್ ಆರ್ಟ್ಸ್ ಸುರತ್ಕಲ್ ಇದರ ಆಶ್ರಯದಲ್ಲಿ ದಿನಾಂಕ 31/08/2024 ಮತ್ತು 01/09/2024 ರಂದು ಸಿಕ್ರೇಟ್ ಹಾರ್ಟ್ ಚರ್ಚ್ ಸಭಾಭವನ, ಸುರತ್ಕಲ್ ಇಲ್ಲಿ ಜರುಗಿದ 35ನೇ ರಾಜ್ಯ ಮಟ್ಟದ ಇಂಟರ್ ಡೂಜೋ ಕರಾಟೆ ಚ್ಯಾಂಪಿಯನ್ ಶಿಪ್ ನಲ್ಲಿ. ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ ಸದಸ್ಯರಾದ ಹಾಗೂ ಕರಾಟೆ ತರಗತಿಯ ತರಬೇತುದಾರರಾದ ಶ್ರೀ ಸುಶಾನ್ ದೇವಾಡಿಗ ಇವರು ಗ್ರ್ಯಾಂಡ್ ಚಾಂಪಿಯನ್ ಶಿಪ್ ಹಾಗೂ ಸ್ಪೋರ್ಟ್ಸ್ ಕ್ಲಬ್ ನ ಕರಾಟೆ ತರಗತಿಯ ವಿದ್ಯಾರ್ಥಿಗಳಾದ ಮಾಸ್ಟರ್ ನಿಹಾಲ್ ಅಮೀನ್ 1 ಚಿನ್ನದ ಪದಕ,ಕುಮಾರಿ ತೃಷಾ ಅಮೀನ್ 1 ಬೆಳ್ಳಿ ಪದಕ,ಮಾಸ್ಟರ್ ಶ್ರವಣ್ ಪೂಜಾರಿ 1 ಬೆಳ್ಳಿ ,1 ಕಂಚಿನ ಪದಕ ಮತ್ತು ಮಾಸ್ಟರ್ ಧನ್ವಿನ್ ಮೇಸ್ತ ಇವರು 2 ಕಂಚಿನ ಪದಕ ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ತರಬೇತುದಾರರಾದ ಶ್ರೀ ಸುಶಾನ್ ದೇವಾಡಿಗ ಇವರ ಶಿಷ್ಯರಾಗಿದ್ದಾರೆ.