ಮೂಡುಬಿದಿರೆ: ಕಿಡ್ನಿ ಹಾಗೂ ಲಿವರ್ ವೈಫಲ್ಯದಿಂದ ಬಳಲುತ್ತಿರುವ ಬಜಗೋಳಿ ಮಾಳ ನಿವಾಸಿ ಸುಶೀಲ ಮೂಲ್ಯ ಅವರ ಪುತ್ರ ಪ್ರಸಾದ್ ಮೂಲ್ಯ ಅವರ ಚಿಕಿತ್ಸೆಗಾಗಿ ತುಳುನಾಡ ಜವನೆರ್ ಬೆದ್ರ ಟ್ರಸ್ಟ್ (ರಿ) ಇದರ 3ನೇ ಸೇವಾ ಯೋಜನೆಯನ್ನು 30,000 ಸಹಾಯಧನದ ಚೆಕ್ ನ್ನು ಭಾನುವಾರ ಹಸ್ತಾಂತರಿಸಿತು.
ಹಾಗೂ ಅವರ ಮನೆಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಒದಗಿಸಲಾಯಿತು.
ತುಳುನಾಡ ಜವನೆರ್ ಬೆದ್ರದ ಅಧ್ಯಕ್ಷ ಹರೀಶ್ ಕುಲಾಲ್, ಉಪಾಧ್ಯಕ್ಷ ಪ್ರದೀಪ್ ಸಂಪಿಗೆ, ಕಾರ್ಯದರ್ಶಿ ಪ್ರಸಾದ್ ನಾಯ್ಕ್ , ಜೊತೆ ಕಾರ್ಯದರ್ಶಿ ಹರಿ ಪ್ರಸಾದ್, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಸದಸ್ಯರುಗಳಾದ ಸುಮಂತ್, ಸುರೇಶ್, ಅನುಷ್ ಪುತ್ತಿಗೆ ಪ್ರಸನ್ನ ನಾಯ್ಕ್ ಹಾಗೂ ಸರ್ವಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.