ಸುರತ್ಕಲ್ : ಮಾನವ ಜೀವನವೆಂಬುದು ಬಹಳ ಅಮೂಲ್ಯವಾದುದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು ಏಕಾಗ್ರತೆ ಛಲಗಳಿಂದ ಸಾಧಿಸಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಜಪೆಯ ಯೋಜನಾಧಿಕಾರಿ ಗಿರೀಶ್ ನುಡಿದರು.
ಅವರು ಸಸಿಹಿತ್ಲು ಶ್ರೀ ಸಾರಂತಾಯ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸುಮಾರು 1 ಲಕ್ಷ 50 ಸಾವಿರ ಅನುದಾನ ಮಂಜೂರು ಅಗಿದ್ದು ಅದರ ಆದೇಶ ಪತ್ರವನ್ನು ಹಸ್ತಾಂತರ ಮಾಡಿ ಮಾತನಾಡಿದರು. ಯೋಜನೆಯ ವತಿಯಿಂದ ಬೇರೆ ಬೇರೆ ಸಮುದಾಯದ ಕಟ್ಟಕಡೆಯ ಬಡ ವ್ಯಕ್ತಿಯ ಕಷ್ಟ ನೋವುಗಳನ್ನು ಅರಿತು ತಕ್ಷಣ ಸ್ಪಂದಿಸಿ ಪ್ರತಿಯೊಂದು ಸಮಾಜಮುಖಿ ಕೆಲಸಗಳಿಗೆ ಅನುದಾನ ನೀಡುತ್ತಿದೆ ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಅರಸು ವೆಲ್ಪೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಗೌತಮ್ ಜೈನ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ,ಉಪಾಧ್ಯಕ್ಷೆ ಚಂದ್ರಿಕಾ, ಸದಸ್ಯರಾದ ಅಶೋಕ್,ಮುಲ್ಕಿ ಜನಜಾಗೃತಿ ವೇದಿಕೆ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯಿರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಲ್ಕಿ ವಲಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ಹಳೆಯಂಗಡಿ ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್,ಮೇಲ್ವಿಚಾರಕಿ ನಿಶ್ಮಿತಾ ಸುರೇಶ್ ಶೆಟ್ಟಿ, ಹಳೆಯಂಗಡಿ ಸೇವ ಪ್ರತಿನಿಧಿ ಮೋಹಿನಿ,ಸಸಿಹಿತ್ಲು ಒಕ್ಕೂಟದ ಅಧ್ಯಕ್ಷೆ ಶೈಲಜಾ,ಉಪಾಧ್ಯಕ್ಷ ರವೀಂದ್ರ ಕೋಟ್ಯಾನ್, ಸಾರಂತಾಯ ಗರೋಡಿ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಕೋಟ್ಯಾನ್,ಉಪಾಧ್ಯಕ್ಷ ಅನಿಲ್ ಕುಮಾರ್,ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಪರಮಾನಂದ ಸಾಲ್ಯಾನ್ ,ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪ ದಯಾನಂದ, ಪಂಚಾಯತ್ ಸದಸ್ಯರು, ಅಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.