Friday, May 23, 2025
Homeರಾಜಕೀಯಮತದಾನ ಮಾಡಿ ಬಂದವರಿಗೆ ಹೋಟೆಲ್ ಗಳಿಂಧ ಭರ್ಜರಿ ಕೊಡುಗೆಗಳು; ಕೆಲವೆಡೆ ಚೌಚೌ ಬಾತ್ ಉಚಿತ!; ಕೆಲವೆಡೆ...

ಮತದಾನ ಮಾಡಿ ಬಂದವರಿಗೆ ಹೋಟೆಲ್ ಗಳಿಂಧ ಭರ್ಜರಿ ಕೊಡುಗೆಗಳು; ಕೆಲವೆಡೆ ಚೌಚೌ ಬಾತ್ ಉಚಿತ!; ಕೆಲವೆಡೆ ಡಿಸ್ಕೌಂಟ್

ಮೈಸೂರು: ಮತದಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೈಸೂರಿನ ಕೆಲವು ಹೋಟೆಲ್ ಗಳು ಮತದಾನದಲ್ಲಿ ಭಾಗವಹಿಸಿ ಬಂದವರಿಗೆ ಕೊಡುಗೆಗಳನ್ನು ಘೋಷಿಸಿವೆ. ಕೆಲವು ಹೋಟೆಲ್ ಗಳಲ್ಲಿ ಚೌಚೌ ಬಾತ್ ಉಚಿತವಾಗಿದ್ದು, ಇನ್ನು ಕೆಲವು ಹೋಟೆಲ್ ಗಳಲ್ಲಿ ಶೇ 10ರಿಂದ ಶೇ 20ರಷ್ಟು ವಿನಾಯತಿ ಘೋಷಿಸಿವೆ.
ಮೈಸೂರಿನ ನಜರಾಬಾದ್ ನಲ್ಲಿರುವ ದಕ್ಷಿಣ ಪಾಕ್ ಹೋಟೆಲ್ ನಲ್ಲಿ ಮೊದಲು ಮತದಾನ ಮಾಡಿ ಬಂದ ಸಾವಿರ ಜನರಿಗೆ ಉಚಿತವಾಗಿ ಚೌಚೌ ಬಾತ್ ನೀಡುವುದಾಗಿ ಘೋಷಿಸಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಈ ಆಫರ್ ಲಭ್ಯವಿರಲಿದೆ. ನಜರಬಾದ್ ಹೋಟೆಲ್ ಹನುಮಂತದಲ್ಲಿ ಮತ ಚಲಾವಣೆ ಮಾಡಿ ಬಂದವರಿಗೆ ಊಟದ ಬಿಲ್ ನಲ್ಲಿ ಶೇ 10 ವಿನಾಯತಿ ಘೋಷಿಸಿದೆ. ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಪುಣೆರಿ ಶ್ರೀಮಾನ್ ಚಹದಂಗಡಿಯಲ್ಲಿ ಮತಚಲಾವಣೆ ಮಾಡಿದವರಿಗೆ ಟೀ, ಕಾಫಿಗೆ ಶೇ 20ರಷ್ಟು 20 ರಿಯಾಯತಿ ಇರಲಿದೆ.

RELATED ARTICLES
- Advertisment -
Google search engine

Most Popular