Sunday, July 21, 2024
Homeರಾಜಕೀಯಕಾರ್ಕಳ ಬಿಜೆಪಿಯಿಂದ ಎ.5ರ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಕಾರ್ಕಳ ಬಿಜೆಪಿಯಿಂದ ಎ.5ರ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಕಾರ್ಕಳ: ಬಿಜೆಪಿ, ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗುತ್ತಿದೆ, ಕಳೆದ ಹಲವು ದಿನಗಳಿಂದ ಪ್ರಮುಖ ನಾಯಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿಕೊಂಡು ವಿವಿಧ ಶಕ್ತಿಕೇಂದ್ರಗಳಲ್ಲಿ ನಿರಂತರ ಕಾರ್ಯಕರ್ತರ ಸಭೆಗಳನ್ನು ನಡೆಸಿ  ಏಪ್ರಿಲ್ 5ರ ಶುಕ್ರವಾರ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದೆ.

ಕಾರ್ಕಳ ಬಿಜಿಪಿಯ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್,  ಪ್ರಮುಖ ನಾಯಕರಾದ ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗ್ಡೆ, ಜಯರಾಮ್ ಸಾಲಿಯನ್, ಉದಯ ಕೋಟ್ಯಾನ್, ಅನಂತ ಕೃಷ್ಣ ಶೆಣೈ ಮುಂತಾದ ನಾಯಕರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿ ಪ್ರತೀ ಶಕ್ತಿ ಕೇಂದ್ರದ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗಿದೆ. 

ಉಡುಪಿಯಲ್ಲಿ ಏಪ್ರಿಲ್ 3 ರಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಯವರ ನಾಮಪತ್ರ ಸಲ್ಲಿಕೆಯ ದಿನ ನಡೆಯುವ ಕಾರ್ಯಕ್ರಮ ಹಾಗೂ ಏಪ್ರಿಲ್ 5 ರಂದು ಕಾರ್ಕಳದಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಸರ್ವ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

RELATED ARTICLES
- Advertisment -
Google search engine

Most Popular