ಭಾರತ ಸರಕಾರ, ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್,ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ ದ.ಕ.ಜಿಲ್ಲೆ,ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021ನೇ ಸಾಲಿನ ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ, ದಿನಾಂಕ:1-12-2024ನೇ ರವಿವಾರ, ಬೆಳಿಗ್ಗೆ 7:00 ರಿಂದ ತೋಕೂರು ಗ್ರಾಮದ 2ನೇ ವಾರ್ಡಿನ ದೇನೊಟ್ಟು ರಾಘವ ಹೆಬ್ಬಾರರ ಮನೆಯ ಬಳಿ ಪರಂಬೋರು ತೋಡಿನ ಕಿಂಡಿ ಅಣೆಕಟ್ಟುವಿಗೆ ಹಲಗೆಗಳನ್ನು ಅಳವಡಿಸಲಾಯಿತು.
▪ಅಣೆಕಟ್ಟುಗಳ ಸಮರ್ಪಕ ನಿರ್ವಹಣೆ ಮೂಲಕ ಮಳೆ ನೀರನ್ನು ತಡೆ ಹಿಡಿದು ಜಲ ಸಂಪನ್ಮೂಲ ಹೆಚ್ಚಿಸುವ ಮಹತ್ಕಾರ್ಯವನ್ನು ನಡೆಸುತ್ತಾ ಬಂದಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಶ್ರೀ ರಾಘವ ಹೆಬ್ಬಾರ್ ಹೇಳಿದರು.
▪ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿತ್ತು. ಈ ಕಿಂಡಿ ಅಣೆಕಟ್ಟುಗಳನ್ನು ಬೇಸಿಗೆಯಲ್ಲಿ ಶುಚಿಗೊಳಿಸಿ ಹಲಗೆಗಳನ್ನು ತೆಗೆದು ಅದಕ್ಕೆ ಎಣ್ಣೆ ಬಳಿದು ಸುರಕ್ಷಿತವಾಗಿರಿಸುವುದು. ಸುತ್ತ ಮುತ್ತ ಸಂಗ್ರಹವಾಗಿದ್ದ ಮರದ ಕೊಂಬೆ, ತ್ಯಾಜ್ಜ ವಸ್ತುಗಳನ್ನು ಶ್ರಮದಾನದ ಮೂಲಕ ತೆರವು ಮಾಡುವುದು. ಮಳೆ ಕಡಿಮೆಯಾದಾಗ ಹಲಗೆಗಳನ್ನು ಅಳವಡಿಸಿ ನದಿ ಸೇರುವ ಮಳೆ ನೀರನ್ನು ತಡೆಹಿಡಿದು ಪರಿಸರದಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಕ್ಲಬ್ ಸದಸ್ಯರು ತೊಡಗಿಸಿಕೊಳ್ಳುವುದರ ಮೂಲಕ ಕಿಂಡಿ ಅಣೆಕಟ್ಟುಗಳ ಅತ್ಯುತ್ತಮ ನಿರ್ವಹಣೆ ಮಾಡಲಾಗುತ್ತಿದೆ.
▪ಗ್ರಾಮಸ್ಥರ ಶ್ಲಾಘನೆ:
ಕ್ಲಬ್ ನ ಸದಸ್ಯರ ಈ ಕಾರ್ಯ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಆರ್ಥಿಕ ಹೊರೆಯನ್ನು ತಗ್ಗಿಸಿದೆ ಹಾಗೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬೇಸಿಗೆ ಕಾಲದಲ್ಲಿ ಕಂಡುಬಂದಿಲ್ಲ. ಸುತ್ತ ಮುತ್ತ ಇರುವ ಗದ್ದೆಗಳಲ್ಲಿ ಫಲವತ್ತಾದ ಫಸಲನ್ನು ರೈತರು ಪಡೆಯುವಂತಾಗಿದೆ.
▪ಕಿಂಡಿ ಅಣೆಕಟ್ಟು ನಿರ್ವಹಣೆ ಕಡಿಮೆಯಾಗಿದೆ. ಆದರೆ ತೋಕೂರಿನಲ್ಲಿ ಅಣೆಕಟ್ಟುಗಳನ್ನು ಸಂಘ ಸಂಸ್ಥೆಗಳೇ ನಿರ್ವಹಿಸವುದರಿಂದ ಸಮಸ್ಯೆ ಉದ್ಭವಿಸಿಲ್ಲ ಎಂದು ಗ್ರಾಮಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸದಸ್ಯರಾದ ಶ್ರೀ ಮೋಹನ್ ದಾಸ್ ಹೇಳಿದರು.
▪ಗ್ರಾಮದ ಜೀವ ಜಲ ಪೂರೈಸುವ ಕಿಂಡಿ ಅಣೆಕಟ್ಟುಗಳ ಸೂಕ್ತ ನಿರ್ವಹಣೆಯ ಜವಾಬ್ದಾರಿ ನಾವೇ ಹೊತ್ತುಕೊಂಡು, ನಮ್ಮ ಸದಸ್ಯರು ಪರಸ್ಪರ ಕೈ ಜೋಡಿಸುತ್ತಾ ಈ ಕಾರ್ಯದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗುತ್ತಿದೆ ಎಂದು ಕ್ಲಬ್ ನ ಅದ್ಯಕ್ಷರಾದ ಶ್ರೀ ದೀಪಕ್ ಸುವರ್ಣ ಹೇಳಿದರು.
▪ಈ ಶ್ರಮದಾನದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಸದಸ್ಯ ಶ್ರೀ ಮೋಹನ್ ದಾಸ್,
▪ ಕ್ಲಬ್ ನ ಅಧ್ಯಕ್ಷರಾದ ಶ್ರೀ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ,ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ದೇವಾಡಿಗ,
ಆರೋಗ್ಯ ನಿಧಿ ಕಾರ್ಯದರ್ಶಿ ಶ್ರೀ ಜಗದೀಶ್ ಕೋಟ್ಯಾನ್, ಸದಸ್ಯರಾದ, ಶ್ರೀ ಗೌತಮ್ ಬೆಲ್ಚಡ್,
ಶ್ರೀ ಸಂತೋಷ್.ಎಸ್. ದೇವಾಡಿಗ, ಶ್ರೀ ರಮೇಶ್ ಕರ್ಕೇರ, ಶ್ರೀ ಪಾಂಡುರಂಗ,
ಗ್ರಾಮಸ್ಥರಾದ ಶ್ರೀ ರಾಘವ ಹೆಬ್ಬಾರ್,ಶ್ರೀ ರಮೇಶ್ ಕುಲಾಲ್ ಹಾಗೂ ಮತ್ತಿತರರು ಪಾಲ್ಗೊಂಡರು.