ಶ್ರೀಮಾತಾ ಭಜನಾ ಮಂಡಳಿ ಕುಳಾಯಿ ಹೊಸಬೆಟ್ಟು ಇವರಿಂದ ಆಟಿದ ಪೊರ್ಲು ಕಾರ್ಯಕ್ರಮವು ಮಂದಾರ ಹೊಸಬೆಟ್ಟುವಿನಲ್ಲಿ ಶಕುಂತಲಾ ರಮಾನಂದ ಭಟ್ ಇಡ್ಯಾ ರವರ ಅಧ್ಯಕ್ಷತೆಯಲ್ಲಿ ಜರಗಿತ್ತು.
ಇವರು ತಮ್ಮ ಭಾಷಣದಲ್ಲಿ ಶ್ರೀಮಾತಾ ಭಜನಾ ಮಂಡಳಿಯಲ್ಲಿರುವ ಸದಸ್ಯರು ಮಹಿಳೆಯರಾಗಿದ್ದು ಕಳೆದ 26 ವರ್ಷದಿಂದ ಉತ್ತಮ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಸಮಾಜದಲ್ಲಿ ಭಜನೆಯಿಂದ ಮಹಿಳಾ ಸಂಘಟನೆ ಬೆಳವಣಿಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆಂದು ಪ್ರಶಂಷಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೋಹಿನಿ ವಿಶ್ವೇಶ್ವರ ಬದವಿದೆ ರವರು ಭಜನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ ಎಂದರು. ರಮೇಶ ಟಿ ಯನ್, ವಿನಯ ಆಚಾರ್ಯ, ಸತ್ಯೆಂದ್ರ ಬಾಬು ಮತ್ತು ಶ್ರೀನಿವಾಸ ಕುಳಾಯಿ ಆಟಿ ತಿಂಗಳ ವಿಶೇಷತೆ ಕುರಿತು ವಿಚಾರ ತಿಳಿಸಿದ್ದರು.

ಈ ಸಂದರ್ಭದಲ್ಲಿ 70 ವರ್ಷ ಮೇಲ್ಪಟ್ಟ ಮಹಿಳಾ ಸಾಧಕಿ ಯರಾದ ಪ್ರಮೀಳಾ, ಸಾವಿತ್ರಿ, ರೂಪಾ, ಕಮಲ, ವನಜಾಕ್ಷಿ, ಕಲಾವತಿ, ರಮಾ ವೆಂಕಟ್ರಾವ್ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಮಹಾಲಕ್ಷ್ಮೀರವರು ಪ್ರಾರ್ಥನೆಗೈದು, ಚಂದ್ರಿಕಾ ಯನ್ ರವರು ಸ್ವಾಗತಿಸಿದ್ದು, ವಿನುತಾ ರಾವ್ ರವರು ಬಹುಮಾನಿತರ ಪಟ್ಟಿಯನ್ನು ಓದಿದ್ದು, ಮೀರಾ ರಘುಚಂದ್ರ ಕಾರ್ಯಕ್ರಮ ಸಂಯೋಜನೆ ಮಾಡಿ ಧನ್ಯವಾದ ನೀಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟಿ ಕಳಂಜಾ, ತುಳು ಹಾಡು, ನೃತ್ಯ, ಹಳ್ಳಿ ಆಟೋಟ, ಕರೋಕೆ ಹಾಡುಗಳನ್ನು ಪ್ರದರ್ಶಿಸಲಾಯಿತು. ಸರ್ವರಿಗೂ ಬೆಲ್ಲ, ಅಕ್ಕಿ, ಹಣ್ಣು ಹಾಗೂ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ವಿತರಿಸಲಾಯಿತು.

