ಬೆಳ್ತಂಗಡಿ: ಜಿಎಸ್ ಬಿ ಮುಖಂಡ, ವಕೀಲ ಕೆ. ಪ್ರಕಾಶ್ ಶೆಣೈ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಜೆ.ಆರ್. ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸಮ್ಮುಖದಲ್ಲಿ ಪ್ರಕಾಶ್ ಶೆಣೈ ಕಾಂಗ್ರೆಸ್ ಸೇರ್ಪಡೆಯಾದರು.
ಪ್ರಕಾಶ ಶೆಣೈ ಅವರ ಪದ್ಮನಾಭ ಶೆಣೈ, ಸಹೋದರಿ ದಿವ್ಯಾಲಕ್ಷ್ಮಿ ಮತ್ತು ರೋಹಿತ್ ನಾಯ್ಕ ಇದೇ ವೇಳೆ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನಾಗೇಶ ಕುಮಾರ್ ಗೌಡ, ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್, ಪ್ರಚಾರ ಸಮಿತಿ ಉಸ್ತುವಾರಿ ಶೇಖರ್ ಕುಕ್ಕೇಡಿ ಮತ್ತಿತರರು ಉಪಸ್ಥಿತರಿದ್ದರು.