ಉಡುಪಿ : ಮಾ 20. ರಂದು ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ ಅಂಗವಾಗಿ ಶ್ರೀ ದೇವರಿಗೆ ರಜತ ಪಲ್ಲಕ್ಕಿ ಸಮರ್ಪಣೆ ಹಾಗೂ ಶೋಭಾ ಯಾತ್ರೆ ನಡೆಯಲಿದೆ.
ದಿನಾಂಕ 23.03.2025 ಆದಿತ್ಯವಾರ ನೂತನ ರಜತ ಪಲ್ಲಕ್ಕಿಯ ಸಮರ್ಪಣ ಸಮಾರಂಭದ ಶೋಭಾ ಯಾತ್ರೆಯು ಮದ್ಯಾಹ್ನ 3.30ಕ್ಕೆ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ದೇವರ ಸನ್ನಿಧಿಯಿಂದ ನೂರಾರು ವಾಹನಗಳೊಂದಿಗೆ ಶೋಭಾ ಯಾತ್ರೆ ಆರಂಭ , ಶೋಭಾಯಾತ್ರೆಯು ಕಲ್ಪನಾ, ಕೆಎಂ ಮಾರ್ಗವಾಗಿ , ಸರ್ವಿಸ್ ಬಸ್ ಸ್ಟಾಂಡ್, ಬನ್ನಂಜೆ, ಕರಾವಳಿ ಬೈಪಾಸ್ ಮಾರ್ಗವಾಗಿ ಮಲ್ಪೆ ಪೇಟೆಗೆ ಬಂದು ಸಂಜೆ 5:00 ಗಂಟೆಗೆ ಶ್ರೀ ರಾಮ ಮಂದಿರ ತಲುಪಲಿದ್ದೇವೆ. ಸಂಜೆ 5:30 ರಿಂದ ಪಲ್ಲಕ್ಕಿ ಸಮಾರ್ಪಣೆಯ ಧಾರ್ಮಿಕ ಕಾರ್ಯಗಳು. ರಾತ್ರಿ 7:30ಕ್ಕೆ ಮಹಾಪೂಜೆಯ ನಂತರ ಶ್ರೀದೇವರಿಗೆ ನೂತನ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ ಭೋಜನ ಪ್ರಸಾದ ನೆಡೆಯಲಿದೆ ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.