ಉಡುಪಿ : ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ ಅಂಗವಾಗಿ ಶ್ರೀ ದೇವರಿಗೆ ರಜತ ಪಲ್ಲಕ್ಕಿ ಸಮರ್ಪಣೆ ಹಾಗೂ ಶೋಭಾ ಯಾತ್ರೆ. ನೂತನ ರಜತ ಪಲ್ಲಕ್ಕಿಯ ಸಮರ್ಪಣ ಸಮಾರಂಭದ ಶೋಭಾ ಯಾತ್ರೆಯು ಮದ್ಯಾಹ್ನ 3.30ಕ್ಕೆ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಗೈದು ಚಂಡೆ ವಾದನ ದೊಂದಿಗೆ ನೂರಾರು ವಾಹನಗಳೊಂದಿಗೆ ಶೋಭಾ ಯಾತ್ರೆ ಆರಂಭ ಗೊಂಡು ಕಲ್ಪನಾ, ಕೆಎಂ ಮಾರ್ಗವಾಗಿ , ಸರ್ವಿಸ್ ಬಸ್ ಸ್ಟಾಂಡ್, ಬನ್ನಂಜೆ, ಕರಾವಳಿ ಬೈಪಾಸ್ ಮಾರ್ಗವಾಗಿ ಮಲ್ಪೆ ಪೇಟೆ ಯಿಂದ ಶ್ರೀ ರಾಮ ಮಂದಿರ ತಲುಪಿತು.

ನೂತನ ಪಲ್ಲಕ್ಕಿ ಸಮಾರ್ಪಣೆಯ ಧಾರ್ಮಿಕ ಕಾರ್ಯಗಳು , ಪ್ರಥಮ ಪಲ್ಲಕ್ಕಿ ಉತ್ಸವ ಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು , ದೇವರಿಗೆ ನೂತನ ರಜತ ಪಲ್ಲಕ್ಕಿ ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ಜಯದೇವ್ ಭಟ್, ಲಕ್ಷ್ಮಣ ಭಟ್, ಮದ್ವೇಶ್ ಭಟ್ ಕಲ್ಯಾಣಪುರ ಇವರಿಂದ ದೇವಾ ವಾಸ್ತು , ನವಕ ಶುದ್ದಿ , ಪೂಜಾ ಹವನಗಳನ್ನು ನೆರವೇರಿಸಿದರು. ಬಳಿಕ ವಿಶೇಷ ಅಲಂಕಾರ ದೊಂದಿಗೆ ಶ್ರೀದೇವರಿಗೆ ಪ್ರಥಮ ಪಲ್ಲಕಿ ಉತ್ಸವ ಭಕ್ತರ ಸಹಕಾರದಲ್ಲಿ ನೆಡೆಯಿತು ಮಹಾ ಪೂಜೆ ಬಳಿಕ ಸಮಾರಾಧನೆ ಜರಗಿತು.
ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುರೇಂದ್ರ ಭಂಡಾರ್ ಕಾರ್ , ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥರಿದ್ದರು
