ಜಿ ಎಸ್ ಬಿ ಸಮಾಜ ರಾಮ ಮಂದಿರ ಮಲ್ಪೆ ಕಾರ್ತೀಕ ಏಕಾದಶೀ ಪ್ರಯುಕ್ತ ಮಂಗಳವಾರ ಶ್ರೀ ದೇವರ ಸನ್ನಿಧಿಯಲ್ಲಿ ನೂರಾರು ಹಣತೆ ದೀಪಗಳಿಂದ ದೀಪಾರಾಧನೆ ಹಾಗೂ ವಿಶೇಷ 108 ಆರತಿ ಹಾಗೂ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಪೂಜೆಯಲ್ಲಿ ನೂರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು , ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ, ಅರ್ಚಕ ಶೈಲೇಶ್ ಭಟ್, ಸುದೀರ್ ಪೈ, ಅನಿಲ್ ಕಾಮತ್, ಜಿ ಎಸ್ ಬಿ ಮಹಿಳಾ ಮಂಡಳಿ, ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು , ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.