ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಇತ್ತೀಚಿಗೆ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಿದ ಜಿಎಸ್‌ಬಿ ವಿದ್ಯಾರ್ಥಿ ವೇತನ ವಿತರಣೆ, ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯ ಶೈಕ್ಷಣಿಕ ಶುಲ್ಕ ಪಾವತಿ, ಕುಟುಂಬ ಚೈತನ್ಯ ಯೋಜನೆಯಡಿ ಆಪದ್ದನ ವಿತರಣೆ ನಡೆಯಿತು. ಅಮ್ಚಿ ಮೆಲ್ಬೋರ್ನ್ ಕೊಂಕಣಿ ಅಸೋಸಿಯೇಷನ್ ಆಸ್ಟ್ರೇಲಿಯಾ ವತಿಯಿಂದ ಅಗತ್ಯವುಳ್ಳವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಲಾಯಿತು. ದಿ ಪಡುಬಿದ್ರೆೆ ದೇವಿದಾಸ ಶರ್ಮ ದತ್ತಿ ನಿದಿಯಿಂದ ಕಾರ್ಕಳ ಶ್ರೀ ಭುವನೇಂದ್ರ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಸಂಸ್ಕೃತದಲ್ಲಿ 125 ಪೂರ್ಣ ಅಂಕಗಳ ಸಾಧನೆಗೈದ 10 ವಿದ್ಯಾರ್ಥಿಗಳಿಗೆ ಗೌರವ ನಗದು ಪುರಸ್ಕಾರ ನೀಡಲಾಯಿತು. ಶೈಕ್ಷಣಿಕ ಮತ್ತು ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾಾರ ನೀಡಿ ಗೌರವಿಸಲಾಯಿತು.ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 2000ಕ್ಕೂ ಮಿಕ್ಕಿ ವಿದ್ಯಾಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯ ಪೀಡಿತರಾದ ಸಾಬ್ರಕಟ್ಟೆೆ ಕಾಜರಳ್ಳಿ ನಾಗೇಶ್ ಪ್ರಭು ಅವರಿಗೆ ಮನೆ ಕಟ್ಟಿಸಿಕೊಡಲು ಯೋಜನೆ ಅಂಗವಾಗಿ 1 ಲಕ್ಷ ರೂ. ಆರಂಭಿಕ ನೆರವನ್ನು ಸಮಾರಂಭದಲ್ಲಿ ಘೋಷಿಸಲಾಯಿತು. ಈ ವೇಳೆ ಗುರುದತ್ ಕಾಮತ್ ಮಂಗಳೂರು, ಡಾ ಚಂದ್ರಕಾಂತ್ ಭಟ್, ರಾಜೇಂದ್ರ ಶೆಣೈ ಮಂಗಳೂರು, ವೈಜಯಂತಿ ಕಾಮತ್, ರಾಧಾಕೃಷ್ಣ ನಾಯಕ್ ಕೋಟ, ರಘುವೀರ್ ಶೆಣೈ ಸ್ಥಳದಲ್ಲಿಯೇ ದೇಣಿಗೆ ಘೋಷಿಸಿ ಒಟ್ಟು 5 ಲಕ್ಷ ರೂ. ಮನೆ ನಿರ್ಮಾಣಕ್ಕೆೆ ದೇಣಿಗೆ ನೀಡಿದರು. ವಿದ್ಯಾ ಪೋಷಕ ವಿದ್ಯಾರ್ಥಿ ವೇತನ ನಿಧಿ ಅಧ್ಯಕ್ಷ ಸಿಎ ಎಸ್.ಎಸ್ ನಾಯಕ್, ಸಂಯೋಜಕ ವಿಜಯ ಕುಮಾರ್ ಶೆಣೈ, ಸಹ ಸಂಯೋಜಕ ಸುಬ್ರಹ್ಮಣ್ಯ ಪ್ರಭು ಮಂಗಳೂರು,ಅನಂತ ವೈದಿಕ ಕೇಂದ್ರದ ಪ್ರವರ್ತಕ ರಾಮಚಂದ್ರ ಅನಂತ ಭಟ್ ಉಪಸ್ಥಿತರಿದ್ದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್. ವಿವೇಕಾನಂದ ಶೆಣೈ ಅವರು ಸ್ವಾಗತಿಸಿದರು. ಅಧ್ಯಕ್ಷ ಜಿ .ಸತೀಶ್ ಹೆಗ್ಡೆೆ ಕೋಟ ವಂದಿಸಿ, ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.