Thursday, September 12, 2024
Homeತುಳುನಾಡುಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಚೊಚ್ಚಲ ಕೃತಿ ಲೋಕಾರ್ಪಣೆ

ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಚೊಚ್ಚಲ ಕೃತಿ ಲೋಕಾರ್ಪಣೆ


ಬಂಟ್ವಾಳ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿ ಜನಮೆಚ್ಚುಗೆ ಪಡೆದ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಚೊಚ್ಚಲ ಕೃತಿ ‘ಕಂಬಳ ಲೋಕ’ ಭಾಗ-1 ರ ಲೋಕಾರ್ಪಣೆಯ ಸರಳ ಕಾರ್ಯಕ್ರಮ ಸಿದ್ದಕಟ್ಟೆಯಲ್ಲಿ ನಡೆಯಿತು.

ಸಿದ್ದಕಟ್ಟೆಯ ವೈದ್ಯ ಡಾ. ಪ್ರಭಾಚಂದ್ರ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು
ಲೇಖಕಿ ರಮ್ಯಾ ನಿತ್ಯಾನಂದ ಪ್ರಸ್ತಾವಿಸಿ ಕಂಬಳ ಕೋಣ ಕೃತಿಯು ನಾಲ್ಕು ಭಾಗಗಳಾಗಿ ಹೊರಬರಲಿದ್ದು ಕಂಬಳ ಕೋಣದ ಮಾಲಕರು, ಓಟಗಾರರು, ಉದ್ಘೋಷಕರು, ಬಿಡಿಸುವವರು. ಕೋಣಗಳನ್ನು ಓಡಿಸಲು ಬೇಕಾದ ಪರಿಕರಗಳನ್ನು ತಯಾರಿಸುವವರು, ಕಂಬಳ ಕೂಟಗಳಲ್ಲಿ ಭಾಗವಹಿಸಿ ಛಾಯಾಗ್ರಹಣ ಮಾಡುವ ಛಾಯಾಗ್ರಾಹಕರು ಹಾಗೂ ಕೆಲವು ಕೋಣಗಳ ಪರಿಚಯ ಇರಲಿದೆ ಎಂದು ಅವರು ವಿವರಿಸಿದರು.

ಸಂಗಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಗೋಳಿದೊಟ್ಟು ಶಿಕ್ಷಕ ರಾಜೇಶ್ ರಾವ್ ನೆಲ್ಯಾಡಿ ಹಾಗೂ ಪೊಡುಂಬ ಸರೋಜಿನಿ ಸಂಜೀವ ಶೆಟ್ಟಿ ಗುಬ್ಬಚ್ಚಿಗೂಡಿನ ಮುಖ್ಯಸ್ಥ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular