ಸುರತ್ಕಲ್: 9 ನೇ ಬ್ಲಾಕ್ ಕುಕ್ಕಿ ಕಟ್ಟೆ ಕೃಷ್ಣಾಪುರದದಲ್ಲಿ ಮೇಯರ್ ಅವರ ಅನುದಾನದ 13 ಲಕ್ಷ ಮೊತ್ತದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ಆವರಣ ಗೋಡೆಯ ಗುದ್ದಲಿ ಪೂಜೆಯನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭ ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಗಳಾದ ಲಕ್ಷ್ಮಿ ಶೇಖರ್ ದೇವಾಡಿಗ, ಪ್ರಶಾಂತ್ ಮೂಡಾಯಿಕೋಡಿ, ಸಮಿತಿಯ ಅಧ್ಯಕ್ಷ ರಮಾನಾಥ ಶೆಟ್ಟಿ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ,ವಜ್ರಾಕ್ಷಿ ಶೆಟ್ಟಿ,ಜಗನ್ನಾಥ ಅತ್ತಾರ್, ಭೋಜರಾಜ ಸೂರಿಂಜೆ,ಭಗವಾನ್, ರಾಮಚಂದ್ರ, ರವೀಂದ್ರ ಶೆಟ್ಟಿ, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.