ಉಡುಪಿ ; ಪೇಜಾವರ ಮಠದ ಆಡಳಿತ ಒಳಪಟ್ಟ ಗುಂಡಿಬೈಲು ಅನುದಾನಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಾಷಿಕೋತ್ಸವ ಡಿ . 13 ಶುಕ್ರವಾರ ದೊಡ್ಡಣಗುಡ್ಡೆಯ ಜನತಾ ವ್ಯಾಯಾಮ ಶಾಲೆಯಲ್ಲಿ ಜರಗಿತು.
ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಚಾಲನೆ ನೀಡಿ , ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು , ಶ್ರದ್ದೆ ಯಿಂದ ಏಕಾಗ್ರತೆ ಯಿಂದ ವಿದ್ಯೆ ಕಲಿತು ಮುಂದೆ ದೇಶದ ಉತ್ತಮ ಪ್ರಜೆಗಳಾಗಿ ಬೆಳೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ ಎಮ್ ಆರ್ ಹೆಗಡೆ , ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ , ಡಾ ಸುದರ್ಶನ್ ಭಾರತೀಯ , ನಗರ ಸಭಾ ಸದಸ್ಯೆ ಗೀತಾ ಶೇಟ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು , ಉಭಯ ಶಾಲಾ ಮುಖ್ಯಸ್ಥರು , ಪೋಷಕರು , ವಿದ್ಯಾರ್ಥಿಗಳು ಉಪಸ್ಥರಿದ್ದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು , ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.