Wednesday, January 15, 2025
Homeಮಂಗಳೂರುಗುರುಕುಮೇರ್‌: ಡಿ. 29ರಂದು ಸಹಸ್ರ ತುಪ್ಪದ ದೀಪೋತ್ಸವ, ಕೇಂಡ ಸೇವೆ ಕಾರ್ಯಕ್ರಮ

ಗುರುಕುಮೇರ್‌: ಡಿ. 29ರಂದು ಸಹಸ್ರ ತುಪ್ಪದ ದೀಪೋತ್ಸವ, ಕೇಂಡ ಸೇವೆ ಕಾರ್ಯಕ್ರಮ

ಗುರುಪುರ: ಶ್ರೀ ಅಯ್ಯಪ್ಪ ಭಕ್ತ ವೃಂದ ಗುರುಕುಮೇರ್‌, ಕಂದಾವರಪದವು ವತಿಯಿಂದ ಗುರುವಂದನಾ, ಸಹಸ್ರ ತುಪ್ಪದ ದೀಪೋತ್ಸವ, ಅಪ್ಪಸೇವೆ ಹಾಗೂ ಕೇಂಡ ಸೇವೆ ಕಾರ್ಯಕ್ರಮ ಡಿ. 29ರಂದು ಜರುಗಲಿದೆ.
ಅಂದು ಬೆಳಗ್ಗೆ 7.30ಕ್ಕೆ ಮಂಟಪಕ್ಕೆ ಮೆರವಣಿಗೆ, 8 ಗಂಟೆಗೆ ದೀಪ ಪ್ರಜ್ವಲನೆ, 8.15ಕ್ಕೆ ಗೋ ಪೂಜೆ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂಜೆ, 12.30ಕ್ಕೆ ಗುರುವಂದನೆ, 1ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 5.15ಕ್ಕೆ ದೀಪೋತ್ಸವ, 8 ಗಂಟೆಗೆ ಮಹಾಪೂಜೆ 9 ಗಂಟೆಗೆ ಸಭಾ ಕಾರ್ಯಕ್ರಮ, 10.30ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 12 ಗಂಟೆಗೆ ಅಗ್ನಿ, ಸ್ಪರ್ಶ, 12.30ಕ್ಕೆ ವಿಧಾತ್ರೀ ಕಲಾವಿಧೆರ್‌ ಕೈಕಂಬ – ಕುಡ್ಲ ಇವರ ಅಭಿನಯದ ʻದೈವರಾಜೆ ಶ್ರೀ ಬಬ್ಬು ಸ್ವಾಮಿʼ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಪ್ರಾತಃಕಾಲ 3ರಿಂದ ಕೆಂಡ ಸೇವೆ ಪ್ರಾರಂಭಗೊಳ್ಳಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಈ ಸೇವಾ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular