ಹಕ್ಕಾಡಿ ಜಗದೀಶ್ ಪೂಜಾರಿ ಮಾಲೀಕತ್ವದ ಹಳ್ಳಿಮಾರ್ಟ್ ನಾವುಂದ ಚೋದ್ರಿ ಅಂಗಡಿ ಕ್ರಾಸ್, ಅರೆಹೊಳೆ ಬೈಪಾಸ್ ಕೊಲ್ಲೂರು ರಸ್ತೆ ಇಂದು ನೂತನವಾಗಿ ಶುಭಾರಂಭಗೊಂಡಿದೆ.
ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ಹಳ್ಳಿಮಾರ್ಟ್ ಉದ್ಘಾಟಿಸಿ, ಮಾತನಾಡಿ ಅರೆಹೊಳೆ ಗ್ರಾಮೀಣ ಪ್ರದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಬಹಳ ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಸೂಪರ್ ಮಾರುಕಟ್ಟೆಯ ಅಗತ್ಯವಿದೆ. ಒಂದೇ ಸೂರಿನಲ್ಲಿ ಇಲ್ಲಿ ಎಲ್ಲವೂ ಲಭ್ಯವಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಿಲಿದೆ. ಮನೆ ಬಾಗಿಲಿಗೆ ತಲುಪಿಸುವ ಸೌಲಭ್ಯವು ಗ್ರಾಹಕರ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಲಿವೆ. ಈ ಸೂಪರ್ ಮಾಕೇಟ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು ಶುಭಾಹಾರೈಸಿದರು.
ಸೂಪರ್ ಮಾರ್ಕೇಟ್ ಮುಖ್ಯಸ್ಥ ಹಕ್ಕಾಡಿ ಜಗದೀಶ್ ಪೂಜಾರಿ ಅವರು ಮಾತನಾಡಿ ಹಳ್ಳಿಯಲ್ಲಿ ಸೂಪರ್ ಮಾರ್ಕೆಟ್ ತೆರೆಯುವುದರಿಂದ ಹಳ್ಳಿಯ ಜನರಿಗೆ ತುಂಬಾ ಪ್ರಯೋಜನವಾಗುತ್ತದೆ,
ಕರ್ನಾಟಕದ ಅತ್ಯಂತ ವಿಶ್ವಾಸನೀಯ ಬ್ರಾಂಡ್ ಅನುಭವಿಸಿ! ₹699 ನ್ನು ಮೀರಿಸಿದ ಖರೀದಿ ಮಾಡಿದರೆ ಉಚಿತ ಉಡುಗೊರೆ ಗೆಲ್ಲುವ ಅವಕಾಶ!
ಹಳ್ಳಿಮಾರ್ಟನಲ್ಲಿ ಶೇಖಡಾ 99% ಕ್ಕೂ ಹೆಚ್ಚು ಉತ್ಪನ್ನಗಳು ಕಡಿತದ ಬೆಲೆಗಳಲ್ಲಿ ಲಭ್ಯವಿವೆ.
ಕಿರಾಣಾ ಅಂಗಡಿಗಳಿಗೆ ನಿಯಮಿತ ದೊಡ್ಡ ಅರ್ಡ‌್ರಗಳಿಗೆ ಕಡಿತ ಬೆಲೆಗಳಲ್ಲಿ ಲಭ್ಯ,
5000+ ಹೆಚ್ಚು ಉತ್ಪನ್ನಗಳಲ್ಲಿ ನಂಬಲಾರದ ಕಡಿತ ಬೆಲೆಗಳಲ್ಲಿ ಆಯ್ಕೆ ₹1000 ಮತ್ತು ಹೆಚ್ಚು ಖರೀದಿ ಮಾಡಿದರೆ 1 ಕಿಮೀ ಒಳಗೆ ಉಚಿತ ಹೋಮ್ ಡೆಲಿವರಿ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮರವಂತೆ -ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ಎಸ್ ರಾಜು ಪೂಜಾರಿ, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘ ಲಿ ಉಪ್ಪುಂದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ,ಉದ್ಯಮಿ ರವಿ ಶೆಟ್ಟಿ ಕುದ್ರುಕೊಡು,ಪ್ರಕಾಶ್ ದೇವಾಡಿಗ,ಗ್ರಾಮ ಪಂಚಾಯತ್ ಸದಸ್ಯರು, ಕುಟುಂಬಸ್ಥರು, ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಗಣ್ಯರಿಗೆ ಹಳ್ಳಿ ಮಾರ್ಟ್ ವತಿಯಿಂದ ಗೌರವಿಸಿ, ಸನ್ಮಾನಿಸಿಲಾಯಿತು.