ಪುತ್ತೂರು: ಯುವ ಮತ್ತು ಮಕ್ಕಳ ಸಾಹಿತ್ಯ ಅಭಿರುಚಿ ಹೆಚ್ಚಿಸಲು ವಿನೂತನ ಕಾರ್ಯಕ್ರಮ ಹಳ್ಳಿಯತ್ತ ಸಾಹಿತ್ಯದ ಚಿತ್ತ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ವತಿಯಿಂದ ನಡೆಯಲಿದೆ.

ಕನ್ನಡ ಭಾಷೆ, ನುಡಿ, ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವ ಗ್ರಾಮೀಣ ಜನರ ಬಳಿಗೆ ತೆರಳಿ ಗ್ರಾಮದ ನೆರೆ ಕರೆಯ ಸಾಹಿತ್ಯ ಅಭಿಮಾನಿಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಮತ್ತು ಸಾಹಿತ್ಯ ಅಭಿರುಚಿ ವೃದ್ಧಿಸುವಂತೆ ಮಾಡುವ ನಿಟ್ಟಿನಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಹಾಗು ಶ್ರೀ ವಾಗ್ದೇವಿ ಸೇವಾ ಸಮಿತಿ ನಲ್ಕ ಇದರ ಸಹಕಾರದೊಂದಿಗೆ ದಿನಾಂಕ 25-9-2022ರಂದು ನಲ್ಕ ಶ್ರೀ ವಾಗ್ದೇವಿ ಮಂದಿರದ ಸಭಾಂಗಣದಲ್ಲಿ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ “ಅಭಿಯಾನದ ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಾಗ್ದೇವಿ ಸೇವಾ ಸಮಿತಿಯ ಅಧ್ಯಕ್ಷರಾದ ವೇದಮೂರ್ತಿ ಶಿವ ಸುಬ್ರಹ್ಮಣ್ಯ ಭಟ್ ಮಾಡಲಿದ್ದು, ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಆಶಾಲತಾ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸತೀಶ್ ಕುಲಾಲ್ ನಲ್ಕ, ದಯಾನಂದ ರೈ ಕಳ್ವಾಜೆ, ಗೋಪಾಲಕೃಷ್ಣ ಶಾಸ್ತ್ರೀ ವಹಿಸಲಿದ್ದು, ತದನಂತರ ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಿಜಯವಾಣಿ ಪತ್ರಿಕೆ ಅಂಕಣಕಾರರು ಮತ್ತು ಸುದಾನ ವಸತಿ ಶಾಲೆಯ ಶಿಕ್ಷಕರಾದ ಶ್ರೀಮತಿ ಕವಿತಾ ಅಡೂರು ವಹಿಸಲಿರುವರೆಂದು ಚಿಗುರೆಲೆ ಬಳಗದ ನಿರ್ವಾಹಕರಾದ ಶ್ರೀ ಚಂದ್ರಮೌಳಿ ತಿಳಿಸಿರುತ್ತಾರೆ.