Sunday, March 23, 2025
Homeಅಂತಾರಾಷ್ಟ್ರೀಯಇರಾನ್‌ಗೆ ನುಗ್ಗಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ಹತ್ಯೆಗೈದ ಇಸ್ರೇಲ್!

ಇರಾನ್‌ಗೆ ನುಗ್ಗಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ಹತ್ಯೆಗೈದ ಇಸ್ರೇಲ್!

ಟೆಹ್ರಾನ್: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆ ನಡೆದಿದೆ. ಇರಾನ್‌ನಲ್ಲಿ ನಡೆದಿರುವ ಈ ಹತ್ಯೆಯನ್ನು ಇಸ್ರೇಲ್ ನಡೆಸಿದೆ ಎನ್ನಲಾಗಿದೆ. ಟೆಹ್ರಾನ್‌ನಲ್ಲಿರುವ ಹಮಾಸ್ ಮುಖ್ಯಸ್ಥನ ನಿವಾಸವನ್ನು ಗುರಿಯಾಗಿಸಿಕೊಂಡು ಇಸ್ಮಾಯಿಲ್ ಹನಿಯೆಹ್​ನನ್ನು ಕೊಲ್ಲಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢಪಡಿಸಿದೆ.

ಬುಧವಾರ ಬೆಳಿಗ್ಗೆ ದಾಳಿ ನಡೆದಿದ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಆರ್‌ಜಿಸಿ ತಿಳಿಸಿದೆ. ಇಸ್ಮಾಯಿಲ್ ಹನಿಯೆಹ್ ಸಾವಿಗೆ ಇಸ್ರೇಲ್ ಹೊಣೆ ಎಂದು ಹಮಾಸ್ ಹೇಳಿದೆ. ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ಭೇಟಿ ನೀಡಿದ್ದರು. ಭೇಟಿ ಬಳಿಕ ಹತ್ಯೆ ಮಾಡಲಾಗಿದೆ.

ಈ ಹಿಂದೆ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಅಂತೆಯೇ ಇದೀಗ ಇಸ್ರೇಲ್ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇಸ್ಮಾಯಿಲ್ ಸಾವಿನ ಬಗ್ಗೆ ಇಸ್ರೇಲ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

RELATED ARTICLES
- Advertisment -
Google search engine

Most Popular