Saturday, July 20, 2024
Homeಧಾರ್ಮಿಕಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಾವರ: ಇಲ್ಲಿನ ಪುರಾತನ ಹಂದಾಡಿ ಹೆಗ್ಗಡೆ ಶ್ರೀ ಸಂತಾನಗೋಪಾಲಕೃಷ್ಣ ದೇವರ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಪುಣ್ಯೋತ್ಸವ ಮೇ1 ಬುಧವಾರದಿಂದ ಮೇ 5 ಭಾನುವಾರದ ತನಕ ನಡೆಯಲಿದ್ದು, ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು, ದೇವಳದ ತಂತ್ರಿ ರಮೇಶ್ ಭಟ್ ನಾಯರ್‌ಬೆಟ್ಟು ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ ಮೇ 2 ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠೆ ಕಾರ್ಯಕ್ರಮ ಮತ್ತು ಮೇ 5 ಭಾನುವಾರದಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅರ್ಚಕ ವೇ.ಮೂ. ಜೀವನ ಉಡುಪ ದೇವರಿಗೆ ಪೂಜೆ ಸಲ್ಲಿಸಿದ ನಂತರ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು, ಹಂದಾಡಿ ನಾಲ್ಕು ಮನೆಯವರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular