ಮೂಡುಬಿದಿರೆ: ಕಳೆದ ೨೫ ವರ್ಷಗಳಿಂದ ಹಂಡೇಲು ದೇವಸ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟಿ ಚೆನ್ನಯ ಹಿರಿಯ ದೈವ ಪಾತ್ರಿಗಳಾದ ಉಮೇಶ್ ಪೂಜಾರಿ ಹಾಗೂ ರಮೇಶ್ ಪೂಜಾರಿ ಕೊಳಕೆ ಇರ್ವತ್ತೂರು ಅವರನ್ನು ಹಂಡೇಲು ದೇವಸ ಶ್ರೀ ವಾಘ್ರಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನಡೆದ ನೇಮೋತ್ಸವದ ಸಂದರ್ಭ ಸನ್ಮಾನಿಸಲಾಯಿತು.
ಗರೋಡಿ ಆಡಳಿತ ಸಮಿತಿ ಅಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ಶ್ರೀಧರ ಕೆ., ಉಪಾಧ್ಯಕ್ಷರಾದ ಮಹೇಂದ್ರ ಬಲ್ಲಾಳ್, ವಿಜೇತ್ ಬಲ್ಲಾಳ್, ಕೋಶಾಧಿಕಾರಿ ಶಿವಾನಂದ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಅಚ್ಯುತ್ ಅಂಚನ್, ಗಿರೀಶ್ ಕುಮಾರ್ ಹಂಡೇಲು, ಪ್ರಮುಖರಾದ ವಿಜಯ ಪೂಜಾರಿ ಉಜಿರಾದೆ, ಗಂಗಾಧರ ಪೂಜಾರಿ, ಮನೋಜ್ ಕುಮಾರ್ ಶೆಟ್ಟಿ, ಪ್ರಮೋದ್ ಕುಮಾರ್, ಪ್ರಕಾಶ್ ಕೋಟ್ಯಾನ್, ಶಿವರಾಮ ಅಂಚನ್ ಅಬ್ಬಣಗುತ್ತು, ಗರೋಡಿ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
ಹಂಡೇಲು ದೇವಸ ನೇಮೋತ್ಸವ, ಸನ್ಮಾನ
RELATED ARTICLES